ಇಂಡಿ : ಅಯ್ಯೋ ಅಯ್ಯಯ್ಯೋ ಅನ್ಯಾಯ, ಅನ್ಯಾಯ ಎಂದು ಬಿಜೆಪಿ ಸರಕಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.
ಪಟ್ಟಣದ ಬಸವೇಶ್ವರ ವೃತ್ ದಲ್ಲಿ ಸಿಲಿಂಡರ್ ,ಪೆಟ್ರೋಲ್, ಡಿಜೈಲ್ ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಬಿಜೆಪಿ ಸರಕಾರದ ಭ್ರಷ್ಟಾಚಾರ ವಿರೋಧಿಸಿ ಸೋಮುವಾರ ಪ್ರತಿಭಟನೆ ಮಾಡಲಾಯಿತು.
ತದನಂತರ ಪ್ರತಿಭಟನಾಕಾರರು ಆಡಳಿತ ಸೌದಕ್ಕೆ ತೆರಳಿದ ಇಂಡಿ – ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಡುಗೆ ಅನಿಲ ಬೆಲೆ ಏರಿಕೆಯನ್ನು ಕಡಿಮೆಗೊಳಿಸಬೇಕು ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂದಿಸಬೇಕು ಎಂದು ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಇಲಿಯಾಸ್ ಬೊರಾಮಣಿ,ಮಂಜುನಾಥ ಕಾಮಗೊಂಡ, ಪ್ರಶಾಂತ ಕಾಳೆ, ಬ್ಲಾಕ್ ಅಧ್ಯಕ್ಷ ಜಾವಿದ ಮೋಮಿನ ಮಾತಾನಾಡಿದ ಅವರು, ಜನಸಾಮಾನ್ಯರಿಗೆ ದಿನ ನಿತ್ಯ ಬೇಕಾಗುವ ಅಡುಗೆ ಅನಿಲದ 50 ರೂ ಹೆಚ್ಚಿಗೆ ಮಾಡಿದ್ದು ಮತ್ತು ಇತರೆ ಸಾಮಗ್ರಿಗಳ ಬೆಲೆಯು ಗಗನಕ್ಕೇರಿದ್ದು ಕೂಡಲೇ ಕೇಂದ್ರ ಸರಕಾರ ಹೆಚ್ಚಾಗಿರುವ ಬೆಲೆಯನ್ನು ಕಡಿಮೆಗೊಳಿಸಬೇಕು. ಇನ್ನೂ 40 ಲಕ್ಷ ರೂಪಾಯಿ ಲಂಚ ಪಡೆದು ಲೋಕಾಯುಕ್ತರ ಕೈಗೆ ಸಿಲುಕಿ ಹಾಕಿಕೊಂಡಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂದಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಲ್ಲನಗೌಡ ಬಿರಾದಾರ,ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳಂಕೆ,ಶ್ರೀಕಾಂತ್ ಕುಡಿಗನೂರ, ಭೀಮಣ್ಣ ಕೌಲಗಿ, ಅವಿನಾಶ್ ಬಗಲಿ, ಪುರಸಭೆ ಸದಸ್ಯ ಅಯೂಬ್ ಬಾಗವಾನ,ಲಿಂಬಾಜಿ ರಾಠೋಡ, ಸತೀಶ ಕುಂಬಾರ, ತಾ.ಪಂ ಮಾಜಿ ಅಧ್ಯಕ್ಷ ರುಕ್ಮುದ್ದಿನ ತದ್ದೆವಾಡಿ, ಬ್ಲಾಕ್ ಅಧ್ಯಕ್ಷ ನಿರ್ಮಲಾ ತಳಕೇರಿ, ಶೈಲಜಾ ಜಾಧವ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.