ರಾಯಚೂರು: ರಾಜ್ಯದ ಜನತೆಯ ಸಮಸ್ಯೆಗಳನ್ನು ಚರ್ಚಿಸಲು ನಿಟ್ಟಿನಲ್ಲಿ ಸದನದ ಕಲಾಪ ನಡೆಸಬೇಕು ಆದರೆ ಕ್ಷುಲ್ಲಕ ಕಾರಣಗಳಿಂದ ಸದನವನ್ನು ಮುಂದೂಡುವುದು ಖಂಡಿಸಿ ಸದನ ನಡೆಸಲೇಬೇಕೆಂದು ಒತ್ತಾಯಿಸಿ ಜಿಲ್ಲಾ ಜನತಾದಳ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳು ಬಗೆಹರಿಸುವ ಉದ್ದೇಶದಿಂದ ರಾಜ್ಯ ವಿಧಾನ ಮಂಡಲದ ಸದನದ ಕಲಾಪಗಳನ್ನು ಬಜೆಟ್ ಅಧಿವೇಶನಕ್ಕಾಗಿ ಕರೆಯಲಾಗಿದೆ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ರಾಜ್ಯದ ಅಭಿವೃದ್ಧಿಗಾಗಿ ಜನರ ಸಮಸ್ಯೆಗಳಿಗಾಗಿ ರಾಜ್ಯ ವಿಧಾನ ಮಂಡಲದ ಸದನದ ಕಲಾಪಗಳನ್ನು ಪಕ್ಷದ ನಾಯಕರು ಕ್ಷುಲ್ಲಕ ವಿಚಾರಗಳಿಗೆ ಚರ್ಚೆ ಮಾಡಿ ವಿಧಾನಸಭೆಯ ಎರಡೂ ಸದನಗಳ ಸಮಯವನ್ನು ವ್ಯರ್ಥಮಾಡಿ ರಾಜ್ಯದ ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ.
ರಾಜ್ಯದ ಹಲವಾರು ಸಮಸ್ಯೆಗಳಾದ ನೀರಾವರಿ ಸಮಸ್ಯೆ, ರೈತರ ಸಮಸ್ಯೆ, ಬೆಂಬಲ ಬೆಲೆಯ ಸಮಸ್ಯೆ, ಅಭಿವೃದ್ಧಿ ಅನುದಾನದ ಬಿಡುಗಡೆಯ ಸಮಸ್ಯೆ, ಮಹಿಳಾ ಸಬಲೀಕರಣ ಸಮಸ್ಯೆ, ಬೆಲೆ ಏರಿಕೆ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಚರ್ಚಿಸಲು ಸದನದಲ್ಲಿ ಚರ್ಚೆ ಮಾಡದೇ ಕೇವಲ ವೈಯಕ್ತಿಕ ಪ್ರತಿಷ್ಠೆಗಾಗಿ ಎರಡೂ ಸದನಗಳ ಕಲಾಪಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಪ್ರತಿದಿನ ಎರಡೂ ವಿಧಾನಮಂಡಲ ಸದನಗಳನ್ನು ನಡೆಯಲು ಒಂದು ದಿನಕ್ಕೆ ಒಂದೂವರೆ ಕೋಟಿ ಹಣವು ಖರ್ಚಾಗುತ್ತಿದ್ದು,ಇದು ಜನರ ತೆರಿಗೆಗಳಿಂದ ಸಂಗ್ರಹವಾದ ಹಣದಿಂದ ವಿಧಾನ ಸಭೆಯ ಕಲಾಪಗಳು ನಡೆಯುತ್ತವೆ ಆದರೆ ಇಂತವುಗಳಿಂದ ಅದು ವ್ಯರ್ಥವಾಗುತ್ತಿದೆ.
ಸದನದ ಕಲಾಪಗಳು ನಡೆದು ನಾಡಿನ ಸಮಸ್ಯೆಗಳಿಗೆ ಪರಿಹಾರವನ್ನು ಚರ್ಚಿಸಲು ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಸಿದ್ಧರಿಲ್ಲ. ಕೇವಲ ಮುಂದಿನ ಚುನಾವಣೆಯ ಮತ ಬ್ಯಾಂಕ್ ದೃಷ್ಟಿಯಿಂದ ಒಣ ಪ್ರತಿಷ್ಠೆಗಾಗಿ ಸದನದಲ್ಲಿ ಕೆಲಸಕ್ಕೆಬಾರದ ವಿಷಯಗಳನ್ನು ಚರ್ಚೆ ಮಾಡಿ ಕಲಾಪವನ್ನು ಮುಂದೂಡುತ್ತಿದ್ದಾರೆ. ಈ ವಿಶೇಷ ವಿಧಾನಮಂಡಲ ಸದನ ಕಲಾಪಗಳು ರಾಜ್ಯದ ಬಜೆಟ್ ಚರ್ಚೆಗಾಗಿ ಕರೆದಿದ್ದು, ಈಗಾಗಲೇ ಕರ್ನಾಟಕದ ಜನತೆ ತಮ್ಮ ತಮ್ಮ ಭಾಗದಲ್ಲಿ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆಯಾಗಲು ಮೂಲಭೂತ ಸೌಕರ್ಯಗಳು ಒದಗಿಸಲು ಸದನದಲ್ಲಿ ಚರ್ಚೆಯಾಗಬೇಕೆಂಬ ಇಚ್ಛೆಯನ್ನು ಹೊಂದಿದ್ದಾರೆ, ಆದರೆ ಬಿ.ಜಿ.ಪಿ, ಮತ್ತು ಕಾಂಗ್ರೇಸ್ ಪಕ್ಷಗಳು ತಮ್ಮ ವೈಯಕ್ತಿಕ ನಾಟಕಗಳ ಮುಖಾಂತರ ಸದನದ ಕಲಾಪವನ್ನು ವ್ಯರ್ಥ ಮಾಡುತ್ತಿದ್ದಾರೆ.
ತಕ್ಷಣವೇ ಎರಡು ಪಕ್ಷಗಳು ತಮ್ಮ ಒಣ ಪ್ರತಿಷ್ಠೆ
ಬದಿಗೊತ್ತಿ ರಾಜ್ಯದ ಜನತೆಯ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಅಭಿವೃದ್ಧಿಗಾಗಿ ತಕ್ಷಣವೇ ಸದನದ ಕಲಾಪಗಳು ನಡೆಸಬೇಕು.
ಒಂದು ವೇಳೆ ತಾವು ಸದನದ ಕಲಾಪಗಳನ್ನು ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಈ ರಾಜ್ಯದ ಜನತೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಎಚ್ಚರಿಸಿದರು. ಆದ್ದರಿಂದ ತಕ್ಷಣವೇ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ವಿಧಾನಮಂಡಲದ ಎರಡೂ ಸದನದ ಕಲಾಪಗಳು ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಡೆಸುವಂತೆ ಒತ್ತಾಯ ಮಾಡಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಜನತಾದಳ ಜಿಲ್ಲಾ ಕಾರ್ಯಾಧ್ಯಕ್ಷರಾದ ಎಂ.ವಿರೂಪಾಕ್ಷಿ,ಜಿಲ್ಲಾ ಕಾರ್ಯಾಧ್ಯಕ್ಷರಾದ ಎನ್.ಶಿವಶಂಕರ ವಕೀಲರು, ರಾಜ್ಯ ಮುಖಂಡರಾದ ಮಹಾತೇಶ ಪಾಟೀಲ್ ಅತ್ತನೂರು,ಹಿರಿಯ ಮುಖಂಡರಾದ ಯೂಸೂಪ್ ಖಾನ್, ತಿಮ್ಮಾರೆಡ್ಡಿ, ದಾನಪ್ಪ ಯಾದವ್, ರಾಮಕೃಷ್ಣ, ಯಲ್ಲಪ್ಪ,ಸೇರಿದಂತೆ ಜನತಾದಳದ ಮುಖಂಡರು ಉಪಸ್ಥಿತರಿದ್ದರು.