ರಾಣಿ ಚೆನ್ನಮ್ಮ ಜಯಂತಿಗೆ ಗೈರಾದ ತಾಲೂಕು ಅಧಿಕಾರಿಗಳು;
ಪ್ರತಿಭಟನೆಗೆ ಮುಂದಾದ ಸಮಾಜದ ಮುಖಂಡರು:
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ:
ಇಂಡಿ : ಸ್ವತಂತ್ರ ಕಿಡಿ ಹೊತ್ತಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಹಿನ್ನಲೆಯಲ್ಲಿ ಗೈರಾದ ತಾಲೂಕು ಅಧಿಕಾರಿಗಳು ವಿರುದ್ಧ ಸಮಾಜದ ಮುಖಂಡರು ಪ್ರತಿಭಟನೆ ನೆಡೆಸಿದರೆ ಘಟನೆ ಇಂಡಿ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದಿದೆ.
ಹೌದು ತಾಲೂಕು ಆಡಳಿತದ ಆಶ್ರಯದಲ್ಲಿ ಸರಕಾರದ ಮಾರ್ಗಸೂಚಿಯಂತೆ ಮತ್ತು ಪೂರ್ವಭಾವಿ ಸಭೆಯಲ್ಲಿ ಚೆರ್ಚೆಸಿದಂತೆ, ಬರಗಾಲ ಹಿನ್ನೆಲೆಯಲ್ಲಿ ತಾಲೂಕು ಅಡಳಿತ ಸೌಧದಲ್ಲಿ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಎಲ್ಲಾ ತಾಲೂಕು ಅಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಳ್ಳಲು ತಹಶಿಲ್ದಾರ ಆದೇಶ ನೀಡಿದರು. ಆದರೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕು ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸಮುದಾಯದ ಮುಖಂಡರು ಹಾಗೂ ಅಭಿಮಾನಿಗಳು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿರುವ ಘಟನೆ ಆಡಳಿತ ಸೌಧದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತ ತಾಲೂಕು ಅಧ್ಯಕ್ಷ ವಿ ಎಚ್ ಬಿರಾದಾರ ಮಾತಾನಾಡಿ, ಸ್ವತಂತ್ರ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಳ್ಳದೇ ತಾಲೂಕು ಅಧಿಕಾರಿಗಳು ಅವಮಾನಿಸಿದ್ದಾರೆ. ಇದನ್ನು ಖಂಡಿಸುತ್ತೆವೆ ಎಂದು ಹೇಳಿದರು. ಪೂರ್ವಭಾವಿ ಸಭೆಯಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ತಹಶಿಲ್ದಾರರಿಗೆ ಮನವಿಮಾಡಲಾಗಿದೆ. ಪೂರ್ವ ನಿಯೋಜಿತ ಕರ್ಯಕ್ರಮಕ್ಕೆ ಗೈರಾದ ತಾಲೂಕು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕರವೆ ಅಧ್ಯಕ್ಷ ಬಾಳು ಮುಳಜಿ, ಸೋಮು ದೇವರ, ಪ್ರಶಾಂತ ಗೌಡ ಬಿರಾದಾರ, ಕರವೇ ಅಧ್ಯಕ್ಷ ಶಿವಾನಂದ ಮಲಕಗೊಂಡ, ಪಾಪು ಕಿತ್ತಲಿ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಹಾವಿನಾಳ ಮಠ, ಶ್ರೀಶೈಲ ಕೊರಳ್ಳಿ, ಅರವಿಂದ ಪಾಟೀಲ್ ಉಪಸ್ಥಿತರಿದ್ದರು.