ಹುಬ್ಬೆ ಹುಣಸೆ ಹಳ್ಳ ಕೆರೆಯಲ್ಲಿ ಹರಾಜು ಪ್ರಕ್ರಿಯೆ ನಡೆಯದೆ ಮೀನು ಸಾಕಣೆ: ಪಿಡಿಓ ವಿರುದ್ಧ ಗ್ರಾಮಸ್ಥರ ಆಕ್ರೋಶ..!
ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹುಬ್ಬೆ ಹುಣಸೆ ಹಳ್ಳದ ಕೆರೆಯಲ್ಲಿ ಯಾವುದೇ ಹರಾಜು ಪ್ರಕ್ರಿಯೆ ನಡೆಯದೆ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಸದೇ ಮೀನು ಸಾಕಾಣಿಕೆ ನಡೆಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲ ಸದಸ್ಯರು ಕೂಡ ಭಾಗಿ ಆಗಿ ಭ್ರಷ್ಟಾಚಾರ ನಡೆಸಿದ್ದಾರೆ. ಯಾರಿಗೂ ತಿಳಿಯದೆ ವ್ಯಕ್ತಿಯೊಬ್ಬರಿಗೆ ಅವಕಾಶ ನೀಡಿದ್ದಾರೆ ಹಾಗು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗೂ ಉದ್ದನೂರು ಗ್ರಾಮದ ಕಾಂಗ್ರೆಸ್ ಮುಖಂಡ ಸಿದ್ದರಾಜು ಎಂಬುವ ವ್ಯಕ್ತಿಯು ಯಾವುದೇ ಹರಾಜು ಪ್ರಕ್ರಿಯೆ ನಡೆಯದಿದ್ದರೂ ನನಗೆ ಟೆಂಡರ್ ಆಗಿದೆ ಎಂದು ಸುಮಾರು 2 ಟನ್ ಮೀನನ್ನು ಅಕ್ರಮವಾಗಿ ಹಿಡಿದಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹನೂರು ಪೊಲೀಸ್ ಠಾಣಿಯಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಮಾಲಾಪುರ ಗ್ರಾಮದಲ್ಲಿ ಗ್ರಂಥಾಲಯ ಇದ್ದು ಯಾವಾಗಲು ಮುಚ್ಚಿಯೇ ಇರುತ್ತದೆ. ಗ್ರಾಮದಲ್ಲಿನ ಓದುಗರ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಗ್ರಂಥಾಲಯ ವಿಚಾರವಾಗಿ ಪ್ರಶ್ನೆ ಮಾಡಿ ಮಾಧ್ಯಮಗಳಲ್ಲಿ ಪ್ರಕಟವಾದರೂ ಕೂಡ ಸಂಬಂಧ ಪಟ್ಟ ಪಿಡಿಓ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಿಕ್ಕಮಲಾಪುರ ಗ್ರಾಮದ ನಿವಾಸಿಗಳಾದ ಶ್ರೀನಿವಾಸ್. ಶಿವಕುಮಾರ್. ಸುರೇಶ್ . ಆಕ್ರೋಶ ವ್ಯಕ್ತಪಡಿಸಿದ್ದಾರೆ ಶುಕ್ರವಾರ ನಡೆದ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದಕ್ಕೆ ತಬ್ಬಿಬ್ಬಾದ ಪಿಡಿಓ ಮಹದೇವ್ ಪ್ರಭು ರವರು ಕೂಡಲೇ ಎಲ್ಲಾ ಸದಸ್ಯರನ್ನು ಕರೆಸಿ ಸಾಮಾನ್ಯ ಸಭೆ ಸೇರಿಸಿ ಅತೀ ಶೀಘ್ರದಲ್ಲೇ ಬಹಿರಂಗವಾಗಿ ಹರಾಜು ಪ್ರಕ್ರಿಯೆ ಕರೆಯಲಾಗುವುದು ಎಂಬುದನ್ನು ಪತ್ರಿಕೆಗೆ ತಿಳಿಸಿದ್ದಾರೆ. ಕೆಲ ಕಾಲ ಪಂಚಾಯತ್ ಮುಂಭಾಗ ಗಲಾಟೆಯೂ ಕೂಡ ನಡೆದಿದ್ದು ಕೂಡಲೇ ಸಂಬಂಧ ಪಟ್ಟ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮುಖ್ಯ ಅಧಿಕಾರಿಗಳು ಚಿಕ್ಕಮಾಲಾಪುರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಹಲವಾರು ಯುವಕರು ಯಜಮಾನರು ಒತ್ತಾಯಿಸಿದ್ದಾರೆ.
ವರದಿ: ಚೇತನ್ ಕುಮಾರ್ ಎಲ್ ,ತಾಲೂಕು ಹನೂರು ಜಿಲ್ಲೆ ಚಾಮರಾಜನಗರ.