ಇಂಡಿ | ತೊಗರಿ ಬೆಳೆ ಪರಿಹಾರ ಆಗ್ರಹಿಸಿ ರಾಜ್ಯ ಹೆದ್ದಾರಿ ತಡೆದು ಕರವೇ ಪ್ರತಿಭಟನೆ
ಇಂಡಿ : ವಿಜಯಪುರ ಜಿಲ್ಲೆಯಲ್ಲಿಯೇ ತಾಂಬಾ ಗ್ರಾಮ ಪಂಚಾಯತ ಬಹುದೊಡ್ಡ ಪಂಚಾಯಿತಿ. ಇಲ್ಲಿ ಮುಖ್ಯವಾಗಿ ತೊಗರಿ ಬೆಳೆಯುತ್ತಾರೆ, ಈ ತೊಗರಿ ಬೆಳೆ ಬೆಳೆದ ರೈತರಿಗೆ ಈ ವರ್ಷ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದೆ ಹಾಗಾಗಿ ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಭಾಗದ ಮುಖ್ಯ ಕಾಲುವೆ ಗುತ್ತಿ ಬಸವಣ್ಣ ಏತ ನೀರಾವರಿ, ಈ ಕಾಲುವೆಗೆ ಇನ್ನೊಂದು ಬಾರಿ ನೀರು ಹರಿಸಿ ಜನ ಜಾನುವಾರ ಹಾಗೂ ಹಳ್ಳಕೊಳ್ಳ ತುಂಬಿಸಬೇಕು. ಎಂದು ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ತಹಸಿಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರು ರಾಯ್ಗೊಂಡ ಪೂಜಾರಿ ಮಾತನಾಡಿ ವಿಮಾ ಕಂಪನಿಯವರು ನಮ್ಮ ರೈತರ ಕಡೆಯಿಂದ ವಿಮಾಕಟ್ಟಿಸಿಕೊಂಡು ನಂತರ ಬೇರೆ ಬೇರೆ ಕಾರಣ ಹೇಳಿ ನಮ್ಮ ರೈತರಿಗೆ ತೊಗರಿ ಇಳುವರಿ ಬರದಿದ್ದರೂ ಸರಿಯಾಗಿ ವಿಮಾ ಪರಿಹಾರ ನೀಡುತ್ತಿಲ್ಲ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ಮಾತನಾಡಿದ ಕರವೇ ವಕ್ತಾರ ಮಾಸಿಮ್ ವಾಲಿಕರ್ ಮಾತನಾಡಿ ಈ ನಮ್ಮ ಬೇಡಿಕೆಗಳನ್ನು ಕೂಡಲೇ ಸ್ಪಂದನೆ ಮಾಡಿ ಪರಿಹಾರ ವಿತರಸಬೇಕು ಇಲ್ಲದಿದ್ದರೆ ನಾವು ಇಂಡಿ ದೇವರ- ಹಿಪ್ಪರಗಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪ ತಹಶಿಲ್ದಾರ ಆರ್ ಬಿ ಮೂಗಿ ಮನವಿ ಸ್ವೀಕರಿಸಿ ಮಾತನಾಡಿದರು. ನಂತರ ಗ್ರಾಮ ಪಂಚಾಯತ ಅಧ್ಯಕ್ಷರಾದ ರಜಾಕ್ ಚಿಕ್ಕಗಸಿ ಉಪಾಧ್ಯಕ್ಷರಾದ ರಾಮಚಂದ್ರ ದೊಡ್ಡಮನಿ ಹಾಗೂ ರವೀಂದ್ರ ನಡಗಡ್ಡಿ ತಾಲೂಕ ಪಂಚಾಯತ ಸದಸ್ಯರಾದ ಪ್ರಕಾಶ ಮುಂಜಿ ರೈತ ಮುಖಂಡರಾದ ಬೀರಪ್ಪ ವಗ್ಗಿ, ವಿಠ್ಠಲ ಹೊರ್ತಿ, ಮಲ್ಲಿಕಾರ್ಜುನ ದಿವಟಗಿ, ಪ್ರಶಾಂತ ದೇಗಿನಾಳ, ರಾಕೇಶ ಬಾಗಲಕೋಟಿ, ಶರಣು ಕಲ್ಲೂರ್, ಶಂಕರ ಗಬಸಾವಳಗಿ, ರಮೇಶ ಚಾಂದಕವಟೆ, ಭೀಮಣ್ಣ ಕನ್ನೂರ ಹಾಗೂ ತಾಂಬಾ ಗ್ರಾಮದ ಸಮಸ್ತ ರೈತ ಬಾಂಧವರು ಸಾರ್ವಜನಿಕರು ಭಾಗವಹಿಸಿದ್ದರು.