ಅಂಜುಟಗಿ ಗ್ರಾಮ ಪಂಚಾಯತ್ ಬೀಗ ಜಡಿದು ಪ್ರತಿಭಟನೆ..! ಏಕೆ ಗೊತ್ತಾ..?
ಇಂಡಿ : ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಬಾರದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ತಾಲ್ಲೂಕಿನಲ್ಲಿ ನಡೆದಿದೆ.
ಇಂದು ಇಡೀ ದೇಶಾದಾದ್ಯಂತ ಸರಕಾರದ ಆದೇಶದಂತೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಾರೆ. ಆದರೆ
ತಾಲ್ಲೂಕಿನ ಅಂಜುಟಗಿ ಗ್ರಾಮ ಪಂಚಾಯತಯಲ್ಲಿ ಜಯಂತಿ ಆಚರಣೆ ಮಾಡಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮಕ್ಕೆ ಬಾರದೆ ನಿರ್ಲಕ್ಷ್ಯ ತೋರಿ ಅಪಮಾನಗೊಳಿಸಿದ್ದಾರೆಂದು ಗ್ರಾಮಸ್ಥರು ಹಾಗೂ ಸಂಘಟಕರು ಪಂಚಾಯತ್ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ.
ಡಾ. ಬಿ. ಆರ್. ಅಂಬೇಡ್ಕರ್… ಭಾರತದ ಹೆಮ್ಮೆಯ ಪುತ್ರ… ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ ಅವರ ಸಾಧನೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಏಪ್ರಿಲ್ 14ರಂದು ಪ್ರತಿವರ್ಷ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯತೋರಿ ಜಯಂತಿಗೆ ಬಾರದೆ ಇರುವುದು ಅತ್ಯಂತ ನೋವು ತಂದಿದೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು ಅಳಲು ತೊಡಗಿಕೊಂಡು.
ಇನ್ನೂ ಪ್ರತಿಭಟನೆ ಸುದ್ದಿ ತಿಳಿದ ತಕ್ಷಣ ತಹಶಿಲ್ದಾರ ಮಂಜುಳಾ ನಾಯಿಕ ಗ್ರಾಮ ಪಂಚಾಯತಗೆ ಧಾವಿಸಿ ಸಮಸ್ಯೆ ಬಗ್ಗೆ ಆಲಿಸಿದರು. ಅಲ್ಲಿರುವ ಸ್ಥಳೀಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿಗೆ ಹಾಜರಾಗದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪ ಮಾಡಿ, ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನಕಾರರಿಗೆ ಸ್ಪಂದಿಸಿದ ತಹಶಿಲ್ದಾರ ಅವರು ಪಿಡಿಒ ಅವರಿಗೆ ನೋಟಿಸ್ ಕೊಡಲಾಗುವುದು ಎಂದು ಮನವೋಲಿಸಿ ಅವರನ್ನು ಪ್ರತಿಭಟನೆಯಿಂದ ಹಿಂದೆ ಸರಿಸಿದರು.
ಈ ಸಂದರ್ಭದಲ್ಲಿ ಯಜಮಾನ ಶಿವಶರಣ, ಅವದುತ ದೊಳ್ಳೆನವರ, ಮರೆಪ್ಪ ದೊಳ್ಳೆನವರ, ಮಾದೇಶ್ ಜ್ಯಾಬೇನವರ, ಹಣಮಂತ ಅಂಜುಟಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪಿಡಿಒ ಅವರಿಗೆ, ಅಂಜುಟಗಿ ಮತ್ತು ನಿಂಬಾಳ ಎರಡು ಗ್ರಾಮ ಪಂಚಾಯತ್ ಜವಾಬ್ದಾರಿ ಹೊಂದಿರುವುದರಿಂದ, ಒಂದು ಕಡೆ ಮುಗಿಸಿಕೊಂಡು ಇನ್ನೊಂದು ಕಡೆ ಬರಬೇಕಾದರೆ ತಡವಾಗಿದೆ. ಹಾಗಾಗಿ ಈ ಸಮಸ್ಯೆ ಉಂಟಾಗಿದೆ. ಅದಲ್ಲದೇ ಸ್ಥಳಕ್ಕೆ ತಹಶಿಲ್ದಾರ ಮಂಜುಳಾ ನಾಯಿಕ ಬೇಟಿ ನೀಡಿ, ಸಮಸ್ಯೆ ಬಗಿಹರಿಸಿದ್ದಾರೆ.