ಸರಿಯಾಗಿ ರಾಜಿನಾಮೆ ಕೊಡಿಸಿ ಇಲ್ಲವೇ ಬೂರ್ಖಾ-ಹಿಜಾಬ್ ಧರಿಸಿ..!
ವಿಜಯಪುರ: ಕಾಟಾಚಾರಕ್ಕೆ ರಾಜೀನಾಮೆ ನಾಟಕ ನಡೆಸಿದ ನಿಮ್ಮ ನಾಯಕನಿಂದ ಧೈರ್ಯವಿದ್ದರೆ ಸರಿಯಾಗಿ ರಾಜೀನಾಮೆ ಕೊಡಿಸಿ, ಸ್ಪೀಕರ್ ಅವರಿಂದ ಅಂಗೀಕರಿಸಿ ನೈಜ ಹೋರಾಟಕ್ಕೆ ಬನ್ನಿ. ಇಲ್ಲವೆ ಕೈಲಾಗದವರೆಂದು ಬೂರ್ಖಾ, ಹಿಜಾಬ್ ದರಿಸಿಕೊಳ್ಳಿ ಎಂದು ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಗಿರೀಶ ಪಾಟೀಲ ಅವರು ಮುಸ್ಲಿಂ ಮುಖಂಡರಾದ ಎಂ.ಸಿ.ಮುಲ್ಲಾ, ಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ಸವಾಲ್ ಹಾಕಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ ರವರು ಕಳೆದ ವಿಧಾನಸಭೆ ಚುನಾವಣೆಯಲ್ಲೇ ತಾಕತ್ತು ಇದ್ದವರು ತಮ್ಮ ವಿರುದ್ಧ ಸ್ಪರ್ಧೆಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆಗ ಸ್ಪರ್ಧಿಸುವ ದಮ್ ತೋರದವರು, ಮುಸ್ಲಿಂರನ್ನು ಮೆಚ್ಚಿಸಲೋ, ಒಣ ಪ್ರಚಾರಕ್ಕೋ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದಕ್ಕೆ, ತಾಕತ್ತು ಇದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸ್ಪೀಕರ್ ಅವರಿಂದ ಅಂಗೀಕಾರವಾದರೆ ಅವರ ಕ್ಷೇತ್ರಗಳಲ್ಲೇ ನಿಲ್ಲಲು ಸಿದ್ದ ಎಂದು ನಮ್ಮ ನಾಯಕ ಬಸನಗೌಡರು ಸವಾಲ್ ಹಾಕಿದ್ದರು. ಎಲ್ಲಿ ಕೂಡ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿಲ್ಲ.
ಆದರೆ, ನಿಮ್ಮ ನಾಯಕರು ಸವಾಲ್ ಎದುರಿಸಲಾಗದೆ, ಮಾನ ಉಳಿಸಿಕೊಳ್ಳಲು ಕಾಟಾಚಾರದ ರಾಜೀನಾಮೆ ನಾಟಕ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬಂತೆ, ಸುಖಾಸುಮ್ಮನೆ ಬಸನಗೌಡರ ಬಗ್ಗೆ ವಿನಾಕಾರಣ ಸುಳ್ಳು ಹೇಳಿಕೆ ನೀಡುವುದು ನಿಲ್ಲಿಸಿ. ನಿಜವಾಗಿಯೂ ನಿಮಗೆ ತಾಕತ್ತು, ದಮ್ ಇದ್ದರೆ, ನಿಮ್ಮ ನಾಯಕನಿಂದ ರಾಜೀನಾಮೆ ಕೊಡಿಸಿ, ಸ್ಪೀಕರ್ ಅವರಿಂದ ಅಂಗೀಕಾರ ಆಗಲಿ, ಹಿಂದೂ ಹುಲಿ ತಾಕತ್ತು ಮತ್ತೊಮ್ಮೆ ನೋಡುವಿರಂತೆ. ರಾಜೀನಾಮೆ ಕೊಟ್ಟು ಸವಾಲ್ ಎದುರಿಸಲು ಆಗದಿದ್ದರೆ, ನಾವು ಕಳುಹಿಸಿ ಕೊಟ್ಟಿರುವ ಬೂರ್ಖಾ, ಹಿಜಾಬ್ ದರಿಸಿಕೊಂಡು, ಯಾರಿಗೂ ಮುಖ ತೋರಿಸದೆ ಅಡ್ಡಾಡಿ ಎಂದು ಸವಾಲ್ ಹಾಕಿದ್ದಾರೆ.
ಇಡೀ ದೇಶದ ಗಮನ ಭಾರತ-ಪಾಪಿಸ್ತಾನದ ಯುದ್ದದ ಬಗ್ಗೆ ಇದ್ದರೆ, ಇಂತಹ ಸಂದೀಗ್ದ ಪರಿಸ್ಥಿತಿಯಲ್ಲಿ ದೇಶದ ಬಗ್ಗೆ ಅಭಿಮಾನ ಹೊಂದಿರದ ಇವರಿಗೆ ರಾಜಕಾರಣವೇ ಮುಖ್ಯವಾಗಿದೆ. ಹೇಗಾದರೂ ಕುತಂತ್ರನದಿಂದ ವಿಜಯಪುರ ನಗರವನ್ನು ತಮ್ಮ ಸಮುದಾಯದ ತೆಕ್ಕೆಗೆ ತೆಗೆದುಕೊಳ್ಳುವ ಬುರ್ಬುದ್ದಿ ಹೊಂದಿದ್ದಾರೆ. ಅದು ಎಂದಿಗೂ ಸಾಧ್ಯವಾಗದು. ಹಗಲುಗನಸು ಕಾಣುವುದು ನಿಲ್ಲಿಸಿ ಎಂದು ಹೇಳಿದ್ದಾರೆ.


















