ಮದ್ಯ ಮಾರಾಟ ನಿಷೇಧ
ಬೆಳಗಾವಿ: ಜಿಲ್ಲಾಡಳಿತದ ವತಿಯಿಂದ ಜನೇವರಿ 12 ಹಾಗೂ 13 ರಂದು ಸಂಗೋಳ್ಳಿ ರಾಯಣ್ಣ ಉತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಸಂಗೋಳ್ಳಿ ರಾಯಣ್ಣ ಉತ್ಸ ವದ ಪ್ರಯುಕ್ತ ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜ.11 ರ ಸಂಜೆ 6 ಗಂಟೆಯಿಂದ ಜ.14 ರ ಮುಂಜಾನೆ 6 ಗಂಟೆಯ ವರೆಗೆ ಬೈಲಹೊಂಗ ತಾಲೂಕಿನ ಸಂಗೋಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ಬಂದ್ ಮಾಡಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿರುತ್ತಾರೆ.