ಕಬಡ್ಡಿ ಆಡುವದರಿಂದ ದೇಹ ಸದೃಢವಾಗುವುದು: ಶ್ರೀಗಳು
ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದಲ್ಲಿ ಅರುಣ್ ಕುಮಾರ್ ಎಂ ವೈ ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಈಶ್ವರಗೊಂಡ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಭಿಷೇಕ್ ಪಾಟೀಲ್ ಯುವ ಮುಖಂಡರು ಮಾಶಾಳ ರವರು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯುವಕರು ಯಾವುದೇ ಕೆಟ್ಟ ಚಟಗಳಿಗೆ ಮಾರುಹೋಗದೆ ಉತ್ತಮ ಕ್ರೀಡೆಗಳನ್ನು ಆಡಿ ಗ್ರಾಮಕ್ಕೆ ತಾಲೂಕಿಗೆ ನಮ್ಮ ರಾಜ್ಯಕ್ಕೆ ಉತ್ತಮ ಹೆಸರನ್ನು ತಂದು ಕೊಡುವಲ್ಲಿ ಯಶಸ್ವಿಯಾಗಬೇಕೆಂಬುದು ನಮ್ಮ ಆಶಯವಾಗಿದೆ, ಯುವಕರು ಇದೇ ರೀತಿ ಕಬ್ಬಡ್ಡಿ ಆಟಗಳನ್ನು ಆಡಿ ದೊಡ್ಡಮಟ್ಟದ ಚಾಂಪಿಯನ್ ಗಳಾಗಿ ಹೊರಹೊಮ್ಮಲಿ ಎಂಬುದೇ ನಮ್ಮ ಆಸೆಯಾಗಿದೆ ಎಂದರು.
ಕ್ರೀಡಾ ಜೋತಿಯನ್ನ ಶ್ರೀಗಳು ಮತ್ತು ಗ್ರಾಮದ ಮುಖಂಡರು ಸೇರಿ ಸ್ವೀಕರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮರುಳಾದ್ಯ ಶ್ರೀಗಳು ಮಾತನಾಡಿ ಇವತ್ತು ಶಿವರಾತ್ರಿ ಶಿವಯೋಗಿ ದಿನ ಇಂತಹ ಕಬ್ಬಡ್ಡಿ ಪಂದ್ಯಾವಳಿಗಳು ಇಟ್ಟಿದ್ದು ಬಹಳ ಸಂತಸ ಯುವಕರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ ಕ್ರೀಡೆಗಳನ್ನು ಆಡಲು ಬಹಳಷ್ಟು ಶಕ್ತಿಯನ್ನು ನೀಡಲಿ ಯುವಕರು ಇದೇ ರೀತಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಕಬಡ್ಡಿ ಆಡುವುದರ ಜೊತೆಗೆ ನಮ್ಮ ದೇಶದ ಹೆಮ್ಮೆಯ ಸೈನಿಕರಾಗಿ ಸೇವೆಯನ್ನು ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಹುಲ್ ಪೂಜಾರಿ ವಿಶ್ವನಾಥ್ ಮಠಪತಿ ವಿಜಯಕುಮಾರ್ ಈಶ್ವರಗೊಂಡ ನೇತೃತ್ವ ಹಾಗೂ ಕಾರ್ಯಕ್ರಮದ ಆಯೋಜಕರಾದ ಶರಣು ಈಶ್ವರಗೊಂಡ ಇರ್ಫಾನ್ ಜಮಾದಾರ್ ಘಂಟೆಪ್ಪ ಪಾಟೋಳಿ ದಸ್ತಗಿರಿ ಚೌದರಿ ಪಿರಪ್ಪ ನಾಯಕೊಡಿ ಕಾಶೀನಾಥ್ ನೀಲಂಗೆ ಶರಣು ಬಬಲಾದ, ರವಿ ಮೈನಾಳ ಸುದರ್ಶನ್ ರಾಠೋಡ, ಶಿವರಾಯ ಸಲಗರ ಪರಶುರಾಮ್ ಸಾಲುಟಗಿ ಸಿದ್ದಲಿಂಗ ಖಾನಾಪುರ್ ಹುಸೇನ್ ಮುಲ್ಲಾ ಬಶೀರ್ ಚೌದ್ರಿ ನಿಂಗಪ್ಪ ಕೋನಳ್ಳಿ ವಿಠೋಬಾ ಹಿರೇಕುರು ಉಸ್ಮಾನ್ ಚೌದರಿ ಚಿದಾನಂದ ನಾಯಕೋಡಿ ಪ್ರಕಾಶ್ ಅಲೆಗಾವ್ ಅಂಬು ರಾಥೋಡ್ ಸುನಿಲ್ ಹೆಸರು ಈಶ್ವರಗೊಂಡ ಸಿದ್ದರಾಮ ಈಶ್ವರಗೊಂಡ ಗಜಾನಂದ ನರಗೋದಿ
ಈ ಕಾರ್ಯಕ್ರಮದ ಮುಖ್ಯ ನಿರ್ಣಾಯಕರಾದ
ಮಂಜುನಾಥ ನಾಯ್ಕೋಡಿ ಅಶ್ಪಾಕ್ ಅವಟೆ ಸಂತೋಷ ಗೌಡರ್ ಸಿದ್ದು ಮೇತ್ರಿ ಬಶಿರ್ ನದಾಫ್ ಸೇರಿದಂತೆ
ಆಯೋಜಕರು ಹಾಗೂ ಗ್ರಾಮಸ್ಥರು ಕ್ರೀಡಾಪಟುಗಳು ವಿದ್ಯಾರ್ಥಿಗಳು ಸಮಸ್ತ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ.