ಮುದ್ದೇಬಿಹಾಳ ;ಪ್ರತಿಯೊಂದು ಗ್ರಾಮದಲ್ಲಿಯ ಸರಕಾರಿ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ಓದಿಸಿ ನಿಮ್ಮ ಊರು ನಿಮ್ಮ ಶಾಲೆಗಳಲ್ಲಿ ಮಕ್ಕಳು ಕಲಿಯಬೇಕು ಖಾಸಗಿ ಶಾಲೆ ವ್ಯಾಮೋಹ ಬಿಡಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಯು ಬಿ ಧರಿಕಾರ ಹೇಳಿದರು ಅವರು ಬುಧುವಾರ ತಾಲೂಕಿನ ಕಂದಗನೂರ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಮಹೋತ್ಸವ, ನಲಿ ಕಲಿ ಕೋಣೆ ಉದ್ಘಾಟನೆ ,ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಕಡಿಮೆ ಇಲ್ಲ ಯಾರೆಲ್ಲ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿದ್ದಿರ ಅದನ್ನು ಈ ವರ್ಷಕ್ಕೆ ಮೊಟಕುಗೂಳಸಿ ನಿಮ್ಮ ಊರಿನ ಸರಕಾರಿ ಶಾಲೆಗಳಲ್ಲಿ ಓದಿಸಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಾಗಬೇಕು ಸರಕಾರ ಮಕ್ಕಳಿಗೆ ಎಲ್ಲಾ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ನುರಿತ ಶಿಕ್ಷಕಕರನ್ನು ನೇಮಕ ಮಾಡಿದೆ ಎಂದರು.
ಈ ವೇಳೆ ಮಾತನಾಡಿದ ಶಿಕ್ಷಕ ನಾಗಣ್ಣ ತುರಡಗಿ, ಸರಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಬಿ ಹೆಚ್ ಮುದ್ನೂರ ಮಾತನಾಡಿ ಕಂದಗನೂರ ಗ್ರಾಮದಲ್ಲಿ ಯಾವ ಜಾತಿ ಮತ ಧರ್ಮದ ಬೇದವಿಲ್ಲದೆ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಮಹೋತ್ಸವ ಆಚರಿಸುತ್ತಿದ್ದಾರೆ ಇದು ಎಲ್ಲರಿಗೂ ಮಾದರಿಯಾಗಬೇಕು ಗ್ರಾಮಗಳಲ್ಲಿ ಪ್ರತಿ ಮನೆ ಮನಗೆ ದೇಣಿಗೆ ಸಂಗ್ರಹಿಸಿ ಊರಲ್ಲಿ ಅದ್ದೂರಿಯಾಗಿ ಜಾತ್ರೆಯನ್ನು ಮಾಡುತ್ತೇವೆ ಅಂತೆಯೇ ನಮ್ಮ ಊರಿನಲ್ಲಿಯ ಜೀವಂತ ದೇವಾಲಯಗಳಾದ ಸರಕಾರಿ ಶಾಲೆಗಳ ಜೀರ್ಣೋದ್ಧಾರ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಸಾಮಗ್ರಿಗಳನ್ನು ಒದಗಿಸುವ ಕೆಲಸವನ್ನು ಮಾಡಬೇಕು ಶಾಲೆಯ ಭೌದ್ಧಿಕ ಅಭಿವೃದ್ಧಿಗೆ ಪಾಲಕರು ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದರು .
ಎ.ಹೆಚ್ ಖಾಜಿ ಎ.ಐ ಮುದ್ದೇಬಿಹಾಳ ಮಾತನಾಡಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್ ಎಂ ಹಿರೇಮಠ ( ಬಾಬು) ಮಾತನಾಡಿ 25 ವರ್ಷಗಳ ತುಂಬಿ ಬೆಳ್ಳಿ ಮಹೋತ್ಸವ ಆರಿಸಿಕೊಳ್ಳುತ್ತಿರುವ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಹಿನ್ನೆಲೆ ಮತ್ತು ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಕಂದಗನೂರ ಗ್ರಾಮಸ್ಥರು ಭಾವೈಕ್ಯತೆ ಶಾಲೆಯ ಕುರಿತು ಇರುವ ಚಿಂತನೆ ಕುರಿತು ವಿವರಿಸಿ ಶಾಲೆಗೆ ಭೂ ದಾನ ಮಾಡಿದವರಿಗೆ ,ಶಾಲೆಗೆ ತಮ್ಮದೆಯಾದ ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ನಲಿ_ಕಲಿ ಶಾಲಾ ಕೋಣೆಯಲ್ಲಿ ಶಾಲೆಯ ಶಿಕ್ಷಕ ಎಸ್ ಎಸ್ ಬುರಾಕಪೋಶ್ ಅವರು ಕಲಾಶಿಕ್ಷಕರಲ್ಲದಿದ್ದರು ಬಿಡಿಸಿರುವ ಕಲಾಚಿತ್ರಗಳ ಬಗ್ಗೆ ವ್ಯಾಪಕ ಮೆಚ್ಚುಗೆ ಪಡೆಯಿತು.
ಕಾರ್ಯಕ್ರಮದಲ್ಲಿ ಹಳೆಯ ಶಾಲಾ ವಿದ್ಯಾರ್ಥಿಗಳಿಗೆ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಸಹಕರಿಸಿದ ಗ್ರಾಮದ ಹಿರಿಯರಿಗೆ ಗಣ್ಯರಿಗೆ ಶಿಕ್ಷಕರಿಗೆ ಸನ್ಮಾನಿಸಲಾಯಿತು ಮತ್ತು ಈ ವೇಳೆ ಹಳೆಯ ವಿದ್ಯಾರ್ಥಿಗಳು ಸಹ ಅಕ್ಷರ ಕಲಿಸಿದ ಗುರುಗಳಿಗೆ ಗೌರವಿಸಿದರು ಶಾಲಾ ಸಮಾರಂಭದಲ್ಲಿ ಬಿ ಎಸ್ ಹೋಳಿ, ರಫಿಕ್ ಕೆಂಭಾವಿ, ಹೆಚ್ ಬಿ ಲಾಹೋರಿ, ದಸ್ತಗಿರಸಾಬ ನಾಯ್ಕೂಡಿ, ಹುಸೇನಸಾಬ ನಾಯ್ಕೂಡಿ, ಅಬ್ದುಲ್ ಸಾಬ ನಾಯ್ಕೂಡಿ, ಸಿದ್ದರಾಮಪ್ಪ ಶಿವಣಗಿ, ಶಂಕರಗೌಡ ಶಿವಣಗಿ, ಎಸ್ ಎಸ್ ಹೂಗಾರ, ಸಾಹೇಬಗೌಡ ಪಾಟೀಲ, ಮಹಿಬೂಬ ನಾಯ್ಕೂಡಿ, ಚಂದಾಸಾಬ ವಾಲಿಕಾರ, ಪ್ರಭುಗೌಡ ಬಿದರಕುಂದಿ,ಎಂ ಆರ್ ಜುಮನಾಳ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಗಂಗಾಶ್ರೀ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು, ವಿದ್ಯಾಭಾರತಿ ಮುಖ್ಯ ಶಿಕ್ಷಕ ಎನ್ ಎಸ್ ಹಿರೇಮಠ ಸ್ವಾಗತಿಸಿದರು, ಶಿಕ್ಷಕಿಯರಾದ ಅಜೇಯಶ್ರೀ ಹಿರೇಮಠ, ಹೇಮಾ ಬಿರಾದಾರ ನಿರೂಪಿಸಿ ವಂದಿಸಿದರು.