ಮುದ್ದೇಬಿಹಾಳ: ಪಾಲಕರಿಗೆ ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನೀಯರ್ ಮಾಡುವ ಕನಸು ಇರುತ್ತದೆ. ಇದಕ್ಕಾಗಿ ಮಕ್ಕಳ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಗಟ್ಟಿಗೊಳಿಸಬೇಕಾಗುತ್ತದೆ. ಈ ಶಿಕ್ಷಣ ಗಟ್ಟಿಗೊಳಿಸುವ ಕೆಲಸವನ್ನು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಮಾಡುತ್ತಿದ್ದು ಉತ್ತರ ಕರ್ನಾಟಕದಲ್ಲೇ ವಿಶೇಷ ಹೆಸರು ಗಳಿಸಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ಹೇಳಿದರು.
ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಸಂಸ್ಥೆಯ ಆವರಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಆಕ್ಸಫರ್ಡ್ ಪಾಟೀಲ್ಸ್ ಜ್ಯೂನಿಯರ್ ಜೀನಿಯಸ್ ಆವಾರ್ಡ-೨೦೨೫ ಸ್ಕಾಲರ್‌ಶಿಪ್ ಸ್ಪರ್ಧಾ ಪರೀಕ್ಷೆ ವಿಜೇತರಿಗೆ ಟ್ರೋಫಿ ಜೊತೆಗೆ ಸತ್ಕರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ನಗದು ಪುರಸ್ಕಾರ ಕೊಡಲಾಗುತ್ತಿತ್ತು. ಈ ವರ್ಷ ಸ್ಕಾಲರ್‌ಶಿಪ್ ಮಾದರಿಯ ಉಚಿತ ಶಿಕ್ಷಣಕ್ಕೆ ಜಾರಿಗೊಳಿಸಲಾಗಿದೆ. ಈ ಪರೀಕ್ಷೆಗೆ ವಿವಿಧ ಜಿಲ್ಲೆಗಳ ೨೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು ಸಂತಸದ ಸಂಗತಿ. ಪ್ರಾಥಮಿಕ, ಪ್ರೌಢ ಹಂತದಲ್ಲೇ ಐಐಟಿ, ಜೆಇಇ, ನೀಟ್ ಸಾಮರ್ಥ್ಯದ ಶಿಕ್ಷಣ ನಮ್ಮಲ್ಲಿ ಸಿಗುತ್ತಿದೆ. ಆಕ್ಸಫರ್ಡ್ ಪಾಟೀಲ್ಸ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಸತತ ೩ ವರ್ಷ ರಾಜ್ಯಕ್ಕೆ ಪ್ರಥಮ, ಕಳೆದ ವರ್ಷ ರಾಜ್ಯಕ್ಕೆ ೨ನೇ ಸ್ಥಾನ ಗಳಿಸಿದೆ. ಕನ್ನಡ ಮಾಧ್ಯಮವೂ ಫಲಿತಾಂಶದಲ್ಲಿ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಪಿಯುಸಿ ನಂತರ ಮೆಡಿಕಲ್ ಸೀಟ್ ಪಡೆಯಲು ಕಟ್‌ಆಫ್ ಅಂಕಗಳಲ್ಲಿ ಏರಿಕೆಯಾಗುತ್ತಿದೆ. ಅದಕ್ಕನುಗುಣವಾಗಿ ಪಿಯುಸಿ ಶಿಕ್ಷಣದ ಗುಣಮಟ್ಟದಲ್ಲೂ ಬದಲಾವಣೆ ತರುತ್ತಿದ್ದೇವೆ ಎಂದರು.
ಅತಿಥಿಗಳಾಗಿದ್ದ ಶಿಕ್ಷಕರಾದ ಸಂಗಮೇಶ ಹೂಗಾರ, ಟಿ.ಡಿ.ಲಮಾಣಿ, ಮಕ್ಕಳ ಪಾಲಕರಾದ ಎಚ್.ಎಂ.ಜಗ್ಗಲ, ವಿಜಯಾ ಪಾಟೀಲ ಇನ್ನಿತರರು ಆಕ್ಸಫರ್ಡ್ ಶಾಲೆಯ ಶಿಕ್ಷಣದ ಗುಣಮಟ್ಟ ಕುರಿತು ಮಾತನಾಡಿ ಶ್ಲಾಘಿಸಿದರು. ಮುದ್ದೇಬಿಹಾಳ ಪುರಸಭೆ ಸದಸ್ಯೆ ಪ್ರತಿಭಾ ಅಂಗಡಗೇರಿ, ಬಾಲಾಜಿ ಸಕ್ಕರೆ ಕಾರ್ಖಾನೆಯ ಎಚ್‌ಆರ್ ವಿಭಾಗದ ಮಾರುತಿ ಗುರವ, ಶಿಕ್ಷಕ ವಿಶ್ವನಾಥ ಬನ್ನೂರ, ಪಿಯು ಕಾಲೇಜು ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ) ವೇದಿಕೆಯಲ್ಲಿದ್ದರು.
ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ ನಿರೂಪಿಸಿದರು. ಮುಖ್ಯಾಧ್ಯಾಪಕ ಮಂಜುನಾಥ ಮಂಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗುರುರಾಜ ಕನ್ನೂರ ಸ್ವಾಗತಿಸಿ ವಂದಿಸಿದರು. ವಿಜಯಪುರ, ಬಾಗಲಕೋಟೆ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಸಾವಿರಾರು ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶಾಲೆಯ ಎಲ್ಲ ವಿಭಾಗಗಳ ಮುಖ್ಯಾಧ್ಯಾಪಕರು, ಶಿಕ್ಷಕರು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಬಾಕ್ಸ್: ಉಚಿತ ಶಿಕ್ಷಣಕ್ಕೆ ಆಯ್ಕೆಯಾದವರು:
ಬಾಗಲಕೋಟ ಜಿಲ್ಲೆ ಸೀತಿಮನಿ ಸರ್ಕಾರಿ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಅಜಯ್‌ಕುಮಾರ ಜಗ್ಗಲ, ಬಿದರಕುಂದಿ ಆರ್‌ಎಂಎಸ್‌ಎ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಅಮೃತಾ ಕರೇಕಲ್, ಹುಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿ ಶ್ರೀನಿಧಿ ಮಾಶೆಟ್ಟಿ (೧ನೇ ರ‍್ಯಾಂಕ್ ಟ್ರೋಫಿ), ೨-೫ನೇ ರ‍್ಯಾಂಕ್ ಪಡೆದ ೭ನೇ ತರಗತಿಯ ತರುಣ್ ಕಾಮನಕೇರಿ, ಪ್ರತೀಕ್ಷಾ ಸಜ್ಜನ, ಅಮೋಘ ಮಂದಳ್ಳಿ, ವಿನಾಯಕಗೌಡ ಗೋರಾಳ, ಮಾಹೀನ ಪತ್ತಾರ, ತೇಜಸ್ ಮಡಿವಾಳರ, ಪ್ರೀತಮ್ ಹಡಪದ, ೬ನೇ ತರಗತಿಯ ಹರ್ಷವರ್ಧನ ಜುಂಗಾಲ, ಅನುರಾಧಾ, ಶಿವಾನಂದ ಬಿರಾದಾರ, ಲಕ್ಷಿö್ಮÃರೆಡ್ಡಿ ವಿ.ಪಿ., ೫ನೇ ತರಗತಿಯ ಸನ್ನಿಧಿ ಹಿರೇಮಠ, ಭಕ್ತಿ ಬಿರಾದಾರ, ಶ್ರೇಯಸ್ ತಳವಾರ, ವಹೀದಾ ವಾಲಿಕಾರ, ವೇದಾವತಿ ಮೇಟಿ, ಮಾರುತಿ ಗಾಡಿ ಇವರನ್ನು ವಸತಿ, ಊಟ ಸಹಿತ ಸಂಪೂರ್ಣ ಉಚಿತ ಶಿಕ್ಷಣಕ್ಕೆ, ೬ನೇ ರ‍್ಯಾಂಕ್ ಪಡೆದ ೭ನೇ ತರಗತಿಯ ತನ್ಮಯ ತಳವಾರ, ನೇತಾಜಿ ಸಾರವಾಡ, ಈಶ್ವರಿ ಕೋಟಿಖಣಿ, ಕುಶಾಲ್ ಕರಾಳಿ, ಅಥರ್ವ ಸಾಳುಂಕೆ, ೫ನೇ ತರಗತಿಯ ವೈಶಾಂತಿ ಪಕಾಳೆ (೬ನರ‍್ಯಾಂಕ್), ಸುಜಲ್ ಭಂಡಾರೆ, ಅನುಷಾ ಬಿರಾದಾರ, ಶ್ರೇಯಸ್ ವಂದಾಲ, ಅರ್ಜುನ ಸೋಮನಾಳ (೭ನರ‍್ಯಾಂಕ್) ಇವರನ್ನು ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಯಿತು. ಆಡಳಿತಾಧಿಕಾರಿ ಅಮಿತಗೌಡ ಪಾಟೀಲ, ನಿರ್ದೇಶಕ ದರ್ಶನಗೌಡ ಪಾಟೀಲ ಅವರು ಎಲ್ಲರನ್ನೂ ಸನ್ಮಾನಿಸಿ ಪುರಸ್ಕರಿಸಿದರು.
ಈಗಾಗಲೇ ಮುದ್ದೇಬಿಹಾಳದಲ್ಲಿ ನಾಗರಬೆಟ್ಟ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಮೊದಲನೇ ಶಾಖೆ ತೆರೆಯಲಾಗಿದ್ದು ಎರಡನೇ ಶಾಖೆಯನ್ನು ಬಾಗಲಕೋಟ ನಗರದಲ್ಲಿ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಮಾರ್ಚ-ಏಪ್ರೀಲ್‌ನಲ್ಲಿ ಬೇಸಿಗೆ ತರಬೇತಿ, ಜೂನ್‌ನಿಂದ ಲಾಂಗ್‌ಟರ್ಮ್ ತರಬೇತಿ ಒದಗಿಸಿಕೊಡಲು ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್. ಪಾಟೀಲರು ತೀರ್ಮಾನಿಸಿದ್ದಾರೆ.
–ಅಮಿತ್‌ಗೌಡ ಪಾಟೀಲ, ಆಡಳಿತಾಧಿಕಾರಿ. ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ.