- ವಿಶ್ವಕರ್ಮ ಸಮಾಜ ಬಾಂಧವರು ಸಂಘಟಿತರಾಗಲು ಕರೆ ನೀಡಿದ : ಲೋಹಿತ್ ಕಲ್ಲೂರ..
ಅಫಜಲಪುರ : ಸೆ. 17 ರಂದು ವಿಶ್ವಕರ್ಮ ಜಯಂತಿ ಆಚರಿಸುವ ಕುರಿತು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವತಿಯಿಂದ ಅಫಜಲಪುರ ಪಟ್ಟಣದ ಶ್ರೀ ಕಾಳಿಕಾ ದೇವಿ ಮಂದಿರದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಕಾರ್ಯದರ್ಶಿ ಲೋಹಿತ್ ವೈ. ಕಲ್ಲೂರ ಮಾತಾನಾಡಿದ ಅವರು, ವಿಶ್ವಕರ್ಮ ಈ ಜಗತ್ತಿನ ಮೊದಲ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿ. ಅಂತಹ ಮಹಾನ್ ವ್ಯಕ್ತಿಯ ಸಮುದಾಯದವರಾದ ವಿಶ್ವಕರ್ಮರು, ಜಗತ್ತಿಗೆ ಮಾದರಿಯಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಮುಂದೆ ಬರಲು ಈಗಿರುವ ಓಬಿಸಿಯಲ್ಲಿ ನ್ಯಾಯ ಸಿಗದೆ ಇರುವುದರಿಂದ ನಾವು ಎಸ್. ಟಿ. ಗೆ ಹೋಗುವದರಿಂದ ಕಡುಬಡವ ಮಕ್ಕಳ ಶಿಕ್ಷಣಕ್ಕೆ, ನಮಗೆ ರಾಜಕೀಯ ಪ್ರಾತಿನಿಧ್ಯ ಸಿಗಲು ಸನ್ಮಾನ ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮರ ಜೊತೆ ರಾಜ್ಯ ಮಟ್ಟದ ಹೊರಾಟಕ್ಕೆ ಬೆಂಬಲ ಸೂಚಿಸಲು ಎಲ್ಲರ ಸಹಕಾರ ಕೋರಿದರು.
ಇದಲ್ಲದೇ ಸಭೆಯನ್ನು ಉದೇಶಿಸಿ ಜಿಲ್ಲಾ ಅಧ್ಯಕ್ಷ ಅಶೋಕ ಪೊದ್ದಾರ್, ದೇವೇಂದ್ರಪ್ಪ ಸುತಾರ, ಸೂರ್ಯಕಾಂತ ವಿಶ್ವಕರ್ಮ ಹಾಗೂ ತಾಲ್ಲೂಕಿನ ಅಧ್ಯಕ್ಷ ಮಾಹಂತೇಶ್ ವ್ಹಿ.ಬಡಿಗೇರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕಮಲಾಕರ ವಿಶ್ವಕರ್ಮ, ಚಿತ್ರಲೇಖಾ ತೆಂಗಳಿಕರ, ಶಿವಲಿಲ ವಿಶ್ವಕರ್ಮ, ಶ್ರೀ ದೇವಿ ವಿಶ್ವಕರ್ಮ, ದೇವೆಂದ್ರಪ್ಪ ನರೋಣ, ತಾಲ್ಲೂಕು ಮುಖಂಡ ರಮೇಶ್ ಸುತಾರ ಆನುರ, ರಾಮಣ್ಣ ಎಸ್ ಸುತಾರ ಕರಜಗಿ, ಶರಣು ಎಸ್ ಬಡಿಗೇರ ಹವಳಗಾ, ಈರಣ್ಣ ಕೆ ನಿಲೂರ, ಯಶವಂತ ಕಂಬಾರ, ಬಸವರಾಜ ಬಡಿಗೇರ ಅಳ್ಳಗಿ ಬಿ, ಕಾಶಿನಾಥ ವಿ ಬಡಿಗೇರ ಅಳ್ಳಗಿ ಬಿ, ಹಣಮಂತ್ರಾಯ ಸುತಾರ ಕರಜಗಿ ಹಾಗೂ ಚಿದಾನಂದ ಕೆ ಸುತಾರ ಮತ್ತು ಇತರರು ಭಾಗಿಯಾಗಿದ್ದರು.