ವಿಜಯಪುರ : ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿ ಪಕ್ಷ ಎಂದು ಸಂಸದ ಪ್ರತಾಪ್ ಸಿಂಹ್ ಹೇಳಿದರು. ವಿಜಯಪುರ ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿದ ಅವರು,
ಲೋಕಾಯುಕ್ತವನ್ನು ಕತ್ತು ಹಿಸುಕಿ ಸಾಯಿಸಿದ್ದು ಕಾಂಗ್ರೆಸ್ ಪಕ್ಷ ಆಗಿದೆ.
ಲೋಕಾಯುಕ್ತ ಬಿಜೆಪಿ ಶಾಸಕನ ಪುತ್ರನೆಂದು ಬಿಡಲಿಲ್ಲ. ಯಾರೇ ಆಗಲಿ ಬಂಧಿಸಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಬಿಜೆಪಿ ಯತ್ನಿಸಿದೆ ಎಂದರು. ಅಲ್ಲದೇ, ಯಾರನ್ನು ರಕ್ಷಿಸಲು ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದಿರಿ ? ಜಯಮಾಲಾ ವಿಚಾರ ಹೊರಬಂತು ಏನಾಯಿತು ? ಆಂಜನೇಯ ಮನೆಯಲ್ಲಿ ಹಣ ಸಿಕ್ಕಿತು ಏನಾಯಿತು ? ನೀವು ತಿಂದಿದ್ದು ಬದನೇಕಾಯಿ ವೇದ ಹೇಳೋದಕ್ಕೆ ಹೋಗಬೇಡಿ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಶೇ. 40 ರಷ್ಟು ಕಮೀಷನ್ ಸರ್ಕಾರ ಎಂದು ಆರೋಪ ಮಾಡುವವರು ನಿಮ್ಮ ಬಳಿ ಸಾಕ್ಷಿ ಇದ್ದರೆ ದೂರು ಕೊಡಿ ಎಂದರು. ರಮೇಶಕುಮಾರ ಅವರೇ ಮೂರು ಮೂರು ತಲೆಮಾರಿಗೆ ಕೂತು ತಿನ್ನುವಷ್ಟು ಮಾಡಿಕೊಂಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಕೆಡಬ್ಲುಎಸ್ ಎಚ್ ಡಿ ಅಧಿಕಾರಿ ಆಗಿದ್ದು ಸಿಕ್ಕಿರುವ ಹಣ ಅವನ ವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಸಿಕ್ಕಿರೋದಾ? ಅವರ ತಂದೆಯ ವಿಚಾರದಲ್ಲಿ ಸಿಕ್ಕಿರೋದಾ? ಎಂಬುದು ತನಿಖೆ ಆಗಬೇಕಿದೆ ಎಂದರು.