ಇಂಡಿ : ನದಿಯ ನೀರಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟು ಇಲ್ಲವೆ ಬ್ರಿಡ್ಜ್ ಪಕ್ಕದಲ್ಲಿ ಮರಳು ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹಸಿರು ಪೀಠ ದಕ್ಷೀಣ ವಲಯ ಚೈನೈ 50 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ರಾಜ್ಯದ ಮಂಗಳೂರು ಜಿಲ್ಲೆಯ ನೇತ್ರಾವತಿ ಮತ್ತು ಪಾಲ್ಗೊಣಿ ನದಿಗಳಲ್ಲಿ ಕಟ್ಟಿದ ಅಣೆಕಟ್ಟಿನ ಮರಳು ಮಾರಾಟ ಮಾಡುತ್ತಿರುವ ಹಿನ್ನೆಲೆ ಚನೈನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದೆ. ಅದಲ್ಲದೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶ ಹೊರತಾಗಿಯೂ ಪದೇಪದೇ ಮರಳನ್ನು ಹಿಡಿದಿಟ್ಟು ವಾಣಿಜ್ಯ ಉದ್ದೇಶಕ್ಕಾಗಿ ಡಿ ಸಿಲ್ಪೆಟ್ ಮರಳನ್ನು ಮಾಡಿರುವುದು ಮಂಗಳೂರು ಜಿಲ್ಲಾಧಿಕಾರಿಗಳ ಪ್ರಸ್ತುತ ಆದೇಶಗಳು ಸಂಪೂರ್ಣ ಉಲ್ಲಂಘನೆಯಾಗಿದ್ದು, ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ. ಜೊತೆಗೆ ಪೂರ್ವ ಪರಿಸರವಿಲ್ಲದೆ ಜಲಮೂಲಗಳ ಹೊಳು ತೆಗೆಯಲು ಅನುಮತಿ ನೀಡಬಾರದು ಎಂದು ತಿಳಿಸಿದ್ದೆನೆ ಎಂದು ಹೇಳಿದರು.
ಮರಳು ನಡೆಸಲು ಆದೇಶ ನೀಡಿದ ಕರ್ನಾಟಕ ರಾಜ್ಯ ಗಣಿ ನಿಗಮ ನಿಯಮಿತ ಕಾರ್ಯಾದೇಶ ರದ್ದು ಪಡಿಸಿ ಆದೇಶ ಹೊರಡಿಸಿದೆ ಎಂದರು.