ಸಿಂಧನೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮುದ್ವೇಷದ ವಿರುದ್ಧ ಸೌಹಾರ್ದ ಬೃಹತ್ ಭಾವೈಕ್ಯತಾ ಸಮಾವೇಶವನ್ನು ಸಂಘಟಿಸುವ ನಿಮಿತ್ಯವಾಗಿ ಹಿರಿಯ ಮುಖಂಡರಾದ ಬಾಬರ್ ಪಾಷಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ನಲ್ಲಿ ವಿವಿಧ ಸಂಘಟನೆಗಳ ಹಾಗೂ ಸಮಾಜದ ಪ್ರಮುಖ ಮುಖಂಡರ ಸಭೆ ನಡೆಯಿತು.
ತಾಲೂಕು ಮಟ್ಟದ ಬೃಹತ್ ಭಾವೈಕ್ಯತಾ ಸಮಾವೇಶವನ್ನು ಮೇ 8-2022 ರಂದು ಬಾನುವಾರ ಆಯೋಜಿಸಲು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಾಮರಸ್ಯವನ್ನು ಹಾಳು ಮಾಡುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಏಪ್ರಿಲ್ 19-2022 ರಂದು ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.
ಅಲ್ಲದೆ ಎಲ್ಲಾ ಸಂಘಟನೆಗಳ ಹಾಗೂ ಆಯಾ ಸಮಾಜದ ಎಲ್ಲಾ ಮುಖಂಡರನ್ನು ಒಕ್ಕೂಟದ ಸಂಚಾಲಕರಾಗಿ ಕಾರ್ಯನಿರ್ವಹಿಸಲು ತೀರ್ಮಾನವನ್ನು ಕೈಗೊಳ್ಳಲಾಯಿತು. ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು, ಸಕ್ರೀಯ ಮುಖಂಡರನ್ನೊಳಗೊಂಡು ಸಭೆಯು 24 ಜನ ಪ್ರಧಾನ ಸಂಚಾಲಕರನ್ನಾಗಿ ಆಯ್ಕೆಗೊಳಿಸಲಾಯಿತು.
ಮೇ 8 ರಂದು ಆಯೋಜನೆ ಮಾಡಲಾದ ಸಮಾವೇಶದ ಪೂರ್ವ ಸಿದ್ದತೆಯನ್ನು ಪ್ರಧಾನ ಸಂಚಾಲಕರ ಸಭೆಯನ್ನು ಕರೆದು ರೂಪರೇಷಗಳನ್ನು ಅಂತಿಮಗೊಳಿಸಿ ಕಾರ್ಯ ಪ್ರವೃತ್ತರಾಗಲು ಸಭೆಯು ನಿರ್ಧರಿಸಿತು.
ಈ ಸಭೆಯಲ್ಲಿ ಶಂಕರ್ ವಾಲೇಕರ್, ನಾರಾಯಣ ಬೆಳಗುರ್ಕಿ,ಎಂ.ಡಿ. ನದೀಮುಲ್ಲಾ, ಲಿಂಗರಾಜ ಮಲ್ಲಾಪೂರ, ವಿಜಯಕುಮಾರ್, ಬಂದೇನವಾಜ್,ಡಾ: ರಾಮಣ್ಣ ಗೋನವಾರ, ಮಹಾದೇವಪ್ಪ ದುಮುತಿ, ಹುಲಿಗಯ್ಯ, ಚಿಟ್ಟಿಬಾಬು, ಮಾಬುಸಾಬ ಬೆಳ್ಳಟ್ಟಿ, ಹೆಚ್.ಕೆ.ದಿದ್ದಗಿ, ಹನುಮಂತ ಕರ್ನಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.