ಇಂಡಿ: ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿ ವಿಭಿನ್ನವಾದ ಸೃಜನಾತ್ಮಕ ಶಕ್ತಿ ಇದ್ದೆ ಇರುತ್ತದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಸಿ ಎಂ ಬಂಡಗಾರ ಹೇಳಿದರು. ಪಟ್ಟಣದ ಶ್ರೀ ಅರುಣಾ ಬಾಯಿ ಗುಲಾಬಚಂದ ಗಾಂಧಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜನೆ ಗೊಳಿಸಿರುವ ಕನ್ನಡ ವಿಷಯದ ಕಾರ್ಯಾಗಾರ ಉದ್ಘಾಟಸಿ ಮಾತಾನಾಡಿದರು.
ಶಾಲೆಯಲ್ಲಿ ವಿಧ್ಯಾರ್ಥಿಗಳು ತಯಾರಿಸಿದ ಕನ್ನಡ ವಿಷಯದ ಅಭ್ಯಾಸ ಚಟುವಟಿಕೆ,ಸ್ಥಬ್ಧ ಚಿತ್ರ, ರಂಗೋಲಿ ಚಿತ್ರದಲ್ಲಿ ವ್ಯಾಕರಣ ಅನಾವರಣ ಮಾಡಿದ್ದು ಗಮನಿಸಿ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗದವರಿಂದ ಅವಿರತ ಪ್ರಯತ್ನ ಕುರಿತು ಪ್ರಶಂಸೆ ಮಾಡಿದರು. ಇನ್ನೂ ಶಿಕ್ಷಕರು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಶೋಧನಾತ್ಮಕ ಚಿಂತನೆ,ವಿಮರ್ಶೆಯ ಜ್ಞಾನ ಬೆಳೆಸಿಕೊಳ್ಳುಲು ಆಸಕ್ತಿ ಮೂಡಿಸಿ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಸಿದ್ದಣ್ಣ ತಾಂಬೆ ಮಾತಾನಾಡಿ ವಿಧ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜನೆ ಮಾಡಿಕೊಳ್ಳುವ ಮೂಲಕ ಮಕ್ಕಳ ಮನೋಮಟ್ಟವನ್ನು ಅರಿತು ಭಾವನಾತ್ಮಕ ಬೋಧನೆ ಮಾಡಲು ಸಹಕಾರಿಯಾಗುತ್ತೆ. ನಿರಂತರ ಚಟುವಟಿಕೆ ನಡೆಸುವುದರಿಂದ ಓದು ಬರಹದ ಅಭ್ಯಾಸದಲ್ಲಿ ವಿಧ್ಯಾರ್ಥಿಗಳು ಆಸಕ್ತಿ ತೋರಿಸುತ್ತಾರೆ ಎಂದರು.
ಕನ್ನಡ ವಿಷಯದ ಶಿಕ್ಷಕ ಕೃಷ್ಣ ಎಚ್.ಬಿ ಮಾರ್ಗದರ್ಶನ ನೀಡಿದರು. ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ, ನಿರ್ದೇಶಕ ಭೀಮನಗೌಡ ಪಾಟೀಲ, ಶಾಂತು ಶಿರಕನಳ್ಳಿ ಉಪಸ್ಥಿತರಿದ್ದರು.