ಮಕ್ಕಳಲ್ಲಿ ಸೃಜನಾತ್ಮಕ ಕೌಶಲ್ಯ ಬೆಳೆಸಲು ಪ್ರತಿಭಾ ಕಾರಂಜಿ ಸಹಕಾರಿ-ಸಂತೋಷ ಬಂಡೆ
ಇಂಡಿ: ಪ್ರತಿಭಾ ಕಾರಂಜಿಯು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ. ಇದು ಶಿಕ್ಷಣ ಕ್ಷೇತ್ರದಲ್ಲಿ ಕಲೆಯನ್ನು ಉತ್ತೇಜಿಸುವ ಮೂಲಕ ಶಾಲಾ ಮಕ್ಕಳ ಕಲಾತ್ಮಕ ಪ್ರತಿಭೆಯ ಜತೆಗೆ ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ ಎಂದು ಸಂತೋಷ ಬಂಡೆ ಹೇಳಿದರು.
ಮಂಗಳವಾರದಂದು ತಾಲೂಕಿನ ಲಿಂಗದಳ್ಳಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಂಬಾಳ ಕೆ ಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿಯು ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು ಆಧುನಿಕ ಯುಗದಲ್ಲಿ ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ತಾಲೂಕ ಶಿಕ್ಷಕರ ಸಂಘದ ಖಜಾಂಚಿ ಆನಂದ ಕೆಂಭಾವಿ ಮಾತನಾಡಿ, ಪ್ರತಿಭಾ ಕಾರಂಜಿ ಎಂಬುದು ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ನಾಯ್ಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಪಿ ವೈ ದಳವಾಯಿ, ಎ ಸಿ ಹುಣಸಗಿ, ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಎಸ್ ವ್ಹಿ ಹರಳಯ್ಯ, ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಪಿ ಎಸ್ ಚಾಂದಕವಟೆ, ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವೈ ಟಿ ಪಾಟೀಲ, ಜಿಪಿಟಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಶಂಕರ ಕೋಳೆಕರ, ಸಿ ಆರ್ ಪಿ ಬಸವರಾಜ ವಾಲೀಕಾರ, ಸೂರ್ಯಕಾಂತ ಹಿರೇಕುರುಬರ, ಶ್ರೀಮಂತ ಹಿರೇಕುರುಬರ, ಈಶ್ವರಗೌಡ ಪಾಟೀಲ, ಸಂತೋಷ ಗೌಡ ಪಾಟೀಲ,
ಖಾದಿರಸಾಬ ದಡೇದ, ಎಸ್ ಟಿ ಲಮಾಣಿ, ಅಬ್ಬಾಸಲಿ ದಡೇದ, ಬುಡ್ಡೆಸಾಬ ದಡೇದ, ಲಾಲಪ್ಪ ಪೂಜಾರಿ, ಬಾಬು ದಡೇದ, ಯಲ್ಲಪ್ಪ ಸುರಪುರ, ಬಂಡೆಪ್ಪ ಕಪ್ಪೆನವರ, ನಿಂಗಪ್ಪ ದೊಡಮನಿ, ಹೂವಣ್ಣ ಅಡವಿ, ಪರಶುರಾಮ ಉಕ್ಕಲಿ, ಎಸ್ ಎಸ್ ಬಡಿಗೇರ, ಎಸ್ ಎಸ್ ಮೂಲಿಮನಿ, ಎಲ್ ಎಂ ಮುಲ್ಲಾ, ಎಸ್ ಕೆ ವಂಗಿ, ಲಕ್ಷ್ಮಣ ನಿಗಡಿ, ಎಸ್ ಎನ್ ಅಡವಿ, ಶಿಲ್ಪಾ ಪೂಜಾರಿ, ಶ್ರುತಿ ಪೂಜಾರಿ, ಸಂತೋಷ ಡೊಂಬರ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು,ಮಕ್ಕಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ, ಅಡುಗೆ ಸಿಬ್ಬಂದಿ ಹಾಗೂ ಗ್ರಾಮದ ವಿಶೇಷ ಮಹಿಳೆಯರನ್ನು ಸನ್ಮಾನಿಸಲಾಯಿತು. ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.