ಅಫಜಲಪುರ: ಗಾಣಗಾಪುರದಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ತಾಲೂಕಿನ ಆನೂರ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಿಂದಿ ವಿಷಯದ ಕಂಠ ಪಾಠದ ಸ್ಪರ್ಧೆಯಲ್ಲಿ ಭಾಗವಹಿಸಿದ ರಜೀಯಾ ರಫೀಕ್ ಶೇಖ್ ಅವರು ದ್ವಿತೀಯ ಸ್ಥಾನ ಹಾಗೂ ಭಕ್ತಿ ಗೀತೆಯಲ್ಲಿ ಶಾಂಭವಿ ಅಯ್ಯಪ್ಪಗೌಡ ಪಾಟೀಲ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ಗಾಣಗಾಪುರ ವಲಯದ ಸಿಆರ್‌ಪಿ ಸುಲೇಮಾನ್ ಚೌದ್ರಿ ಅವರು ತಾಲೂಕಿನ ಆನೂರ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಶಾಲೆಯ ಮುಖ್ಯ ಗುರುಗಳನ್ನು ಸನ್ಮಾನಿಸಿದರು.
ಬಳಿಕ ಸಿಆರ್‌ಪಿ ಸುಲೇಮಾನ್ ಚೌದರಿ ಮಾತನಾಡಿ ಪ್ರತಿಭಾ ಕಾರಂಜಿಗಳು ಗ್ರಾಮೀ ಭಾಗದ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರಲ್ಲಿ ಪ್ರತಿಭೆ ಹೊರ ಬರಲಿದೆ ಅದಕ್ಕಾಗಿ ಶಿಕ್ಷಕರಾದವರು ಎಲ್ಲ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು ಎಂದ ಅವರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಚಂದ್ರಕಾಂತ ಸಿಂಗೆ ಮಾತನಾಡಿ ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮ ಸ್ಪರ್ಧೆ ನೀಡಿ ವಿಜೇತರಾಗಿದ್ದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಯಲ್ಲಮ್ಮ ಸಿಂಗೆ, ರೂಪಾ ಪಾಟೀಲ, ಚಂದ್ರಕಲಾ ಸೀತನೂರ, ಕಾವೇರಿ ಪಾಟೀಲ, ಅರುಣಾ ಪಾಟೀಲ, ಸಿದ್ದಣ್ಣ ಬಡದಾಳ ಇದ್ದರು.