ಮಸ್ಕಿ: ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕಿನ ಪರಾಪೂರ ಶುಬೋದಯ ಪಬ್ಲಿಕ್ ಶಾಲೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಪಟ್ಟಣದ ಪ್ರಕೃತಿ ಫೌಂಡೇಶನ್ (ರಿ) ನ ಸಂಸ್ಥಾಪಕ ಅಧ್ಯಕ್ಷರಾದ ಶಿವಮೂರ್ತಿ ಗದ್ಗಿಮಠ ನೇತೃತ್ವದಲ್ಲಿ ಹೊಂಗೆ, ಹೆಬ್ಬೇವು, ಬೇವಿನ ಸಸಿಗಳನ್ನು ಹಚ್ಚಲಾಯಿತು.

ಈ ವೇಳೆ ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ ಮಾತನಾಡಿ, ಪರಿಸರವನ್ನು ರಕ್ಷಣೆ ಮಾಡುವದ ನಮ್ಮ ನಿಮ್ಮೆಲರ ಕರ್ತವ್ಯ. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಅಷ್ಟೇ ಅಲ್ದೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಹಾಗೂ ದೈಹಿಕ ಶಿಕ್ಷಕ ಹನುಮೇಶ್, ಶ್ರೀಶೈಲ್, ನಾಗರಾಜ್, ಚಾಲಕರು ದಾವಲ್ ಸಾಬ್, ಲಿಂಗಯ್ಯ,ಹಂನುಮಂತ, ಹಾಗೂ ವಿದ್ಯಾರ್ಥಿಗಳು ಇದ್ದರು.



















