ವಿಶ್ವಕರ್ಮರ ಬೆನ್ನಿಗೆ ಮೋದಿ ಸರಕಾರ : ಸಂಸದ ರಮೇಶ್ ಜಿಗಜಿಣಗಿ.
ಸ್ವಾವಲಂಬಿ ಬದುಕು ಕಟ್ಟಲು ಸಾವಿರಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮೋದಿ ಸರಕಾರಕ್ಕೆ : ಸಂಸದ ರಮೇಶ ಜಿಗಜಿಣಗಿ.
ಇಂಡಿ : 75 ವರ್ಷ ಅಡಳಿತ ಮಾಡಿದ್ರೂ ಬಡವರ ಹಿಂದುಳಿದವರ ಪರವಾದ ಇಂತಹ ಯೋಜನೆಗಳು ಸೃಷ್ಟಿ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಶನಿವಾರ ಕಿಡಿಕಾರಿದರು.
ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಯದಲ್ಲಿ ಇಂಡಿ ಮತ್ತು ಚಡಚಣ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಜರುಗಿದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ನೂರಾರು ವರ್ಷಗಳಿಂದ ಕರಕುಶಲ ಕೆಲಸ ಹಾಗೂ ಆಕರ್ಷಕ ವಸ್ತುಗಳ ತಯಾರಿಕೆ ಮಾಡುವ ಮೂಲಕ ಗಮನಸೆಳೆದಿರುವ ವಿಶ್ವಕರ್ಮರಿಗೆ ಮೋದಿ ನೇತೃತ್ವದ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. ವಿಶ್ವಕರ್ಮ ಸಮುದಾಯದಲ್ಲಿ ಈ ಕಾರ್ಯಕ್ರಮ ಶಿಕ್ಷಣ, ಜಾಗೃತಿ, ಪ್ರಚಾರ. ಹಕ್ಕೊತ್ತಾಯ, ಪುನರುತ್ಥಾನದ ಉದ್ದೇಶಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ. ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು “ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ. ಹಾಗಾಗಿ ದುಡಿಯುವ ಕೈ ಗಳಿಗೆ, ಸ್ವಾವಲಂಬನೆ ಜೀವನ ನಡೆಸುವ ಬಡ ಜನರಿಗ ಸಹಾಯವಾಗುವ ಯೋಜನೆ ಪಕ್ಷದ ಕಾರ್ಯಕರ್ತರು ಜನರಿಗೆ ತಲುಪಿಸುವ ಗುರು ತೆರೆಯ ಜವಾಬ್ದಾರಿ ಹೊಂದಿದ್ದಿರಿ ಎಂದು ಹೇಳಿದರು. ಜಿಲ್ಲೆಯಲ್ಲಿ ಅನೇಕ ಮಹತ್ತರವಾದ ಕೆಲಸಗಳು ನಡೆದಿವೆ. ದ್ವಿಪಥದ ಪಟರಿಯುಳ್ಳ ವಿದ್ಯುತ್ ಚಾಲಿತ ರೈಲು ವ್ಯವಸ್ಥೆ, 7 ರಾಷ್ಟ್ರೀಯ ಹೆದ್ದಾರಿಗಳು, ಸ್ವಲ್ಪ ಸಮಯದಲ್ಲಿ ವಿಮಾನ ಹಾರಾಟ ಮಾಡುವಂತಹ ಅತ್ಯುತ್ತಮ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಲಿವೆ ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ವಿಶ್ವಕರ್ಮ ಯೋಜನೆ ರಾಜ್ಯ ಸಂಚಾಲಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ ಡಬ್ಬಿ ಮಾತಾನಾಡಿದ ಅವರು, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ 18 ವೃತ್ತಿಯ
ಕುಶಲಕರ್ಮಿಗಳು ಯೋಜನೆ ಸೌಲಭ್ಯ ಪಡೆದುಕೊಳ್ಳಬಹುದು. ಈ ವೃತ್ತಿ ಅಭಿವೃದ್ಧಿಗೊಳಿಸಿ ಕೊಳ್ಳುವಿಕೆ, ವೃತ್ತಿ ಉನ್ನತೀಕರಣಗೊಳಿಸಲು ಅಗತ್ಯ ತರಬೇತಿ, ಉಪಕರಣ ಕಿಟ್ ಮತ್ತು ಬಡ್ಡಿ ರಿಯಾಯಿತಿ ದರದಲ್ಲಿ ಆರ್ಥಿಕ ನೆರವು, ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ 18 ವೃತ್ತಿಯ ಕುಶಲಕರ್ಮಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಬಹುದಾಗಿದೆ ಎಂದಿದ್ದಾರೆ.
ಬಡಗಿ, ಕಮ್ಮಾರಿಕೆ, ಚಮ್ಮಾರಿಕೆ, ಅಕ್ಕಸಾಲಿಗ, ದೋಬಿ, ಕುಂಬಾರಿಕೆ, ಟೈಲರ್, ಕೌರಿಕ, ಶಿಲ್ಪಿ, ಪೊರಕೆ ತಯಾರಿಕೆ/ ತೆಂಗಿನ ನಾರಿನ ಉತ್ಪನ್ನ ನೇಯ್ದೆ ಬುಟ್ಟಿ ತಯಾರಿಕೆ, ಗೊಂಬೆ ತಯಾರಿಕೆ, ಮೀನು ಬಲೆ ಮಾಡುವವರು, ಹೂವಿನ ಹಾರ ತಯಾರಿಕೆ, ಬೀಗ ತಯಾರಕರು, ರಕ್ಷಾ ಕವಚ ತಯಾರಕರು, ಹ್ಯಾಮರ್ ಮತ್ತು ಟೂಲ್ ಕಿಟ್ ತಯಾರಿಕೆ, ದೋಣಿ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಮೋದಿ ನೇತೃತ್ವ ಸರ್ಕಾರದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಯುವಕರು ೨೦೧೪ ರಿಂದ ಅಭಿವೃದ್ಧಿ ಯುಗವೆಂದು ನಂಬಿದ್ದರು. ಅದರಂತೆ ಮೋದಿ ಸರಕಾರ ಕಟ್ಟೆ ಕಡೆಯ ವ್ಯಕ್ತಿಗಳಿಗೂ ಸರಕಾರದ ಸೌಲಭ್ಯ ಮುಟ್ಟಬೇಕು ಮತ್ತು ಕರಕುಶಲಮಿಗಳು ಸ್ವಾವಲಂಬನೆ ಜೀವನ ನಡೆಸಬೇಕು ಎಂದು ಇಂತಹ ಯೋಜನೆಗಳನ್ನು ಜಾರಿಗೆ ಗೊಳಿಸಿದ್ದಾರೆ. ಅದು ಸಾಮನ್ಯ ಬಡ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಮೇಲೆ ವಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಪಕ್ಷದ ಜೀವಾಳವಾಗಿ ಜನರಿಗೆ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಹಾಯ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ಸಾಬಣ್ಣ ಮಾಶ್ಯಾಳ,ಮಲ್ಲಿಕಾರ್ಜುನ ಜೋಗುರು ಹಾಗೂ ಅನೀಲ ಜಮಾದಾರ ಮಾತಾನಾಡಿದರು. ಅದಲ್ಲದೇ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರಾಸ್ಥವಿಕ ಮಾತಾನಾಡಿದರು.
ಈ ಸಂದರ್ಭದಲ್ಲಿ ಚಡಚಣ ಮಂಡಲ ಅಧ್ಯಕ್ಷ ರಾಮಣ್ಣ ಅವಟಿ, ಹಣಮಂತರಾಯಗೌಡ ಪಾಟೀಲ್, ರಾಜಕುಮಾರ ಸಗಾಯಿ, ಯಲ್ಲಪ್ಪ ಹದರಿ, ಶ್ರೀಶೈಲ ಮದರಿ, ವಿಜಯಲಕ್ಷ್ಮಿ ರೂಗಿಮಠ, ರವಿ ಬಡಿಗೇರ, ಪ್ರಮೋದ ಬಡಿಗೇರ ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ರವಿ ವಗ್ಗಿ ಸ್ವಾಗತಿಸಿ ನಿರೂಪಿಸಿದರು.