ಇಂದು ತಾಲೂಕಿನ ಹಲವೆಡೆ ವಿದ್ಯುತ್ ವ್ಯತಯ
ಹನೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ವಿಭಾಗ ವ್ಯಾಪ್ತಿಯಲ್ಲಿ ಬರುವ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆಯನ್ನು ಹಮ್ಮಿಕೊಂಡಿ – ರುವುದರಿಂದ ಫೆಬ್ರವರಿ 8 ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಹನೂರು, ಅಜ್ಜಿಪುರ ರಾಮಾಪುರ ಕೌದಳ್ಳಿ ಪಟ್ಟಣದ ವಿದ್ಯುತ್ ವ್ಯತಯವಾಗಲಿದೆ ಎಂದು ಸಹಾಯಕ ಕಾರ್ಯ ಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಕೌದಳ್ಳಿ ಮಾಟಳ್ಳಿ ವಿದ್ಯುತ್ ಮಾರ್ಗಕ್ಕೆ ಹಾಲಿ ಇರುವ ಟ್ಯಾಪ್ಪಿಂಗ್ 66 ಕೆ ವಿ ರಾಮಾಪುರ ವಿದ್ಯುತ್ ಮಾರ್ಗವನ್ನು ಸುಮಾರು 11 ಕಿಲೋಮೀಟರ್ ನಷ್ಟು ಲಿಲೋ ಮಾರ್ಗವಾಗಿ ಮಾರ್ಪಾಡು ಮಾಡುವ ಕಾಮಗಾರಿಗೆ 66/11 ಕೆ ವಿ ರಾಮಾಪುರ ಹಾಗೂ ಮಾಟಳ್ಳಿ ವಿದ್ಯುತ್ ಉಪ ಕೇಂದ್ರಗಳಲ್ಲಿ ಮಾರ್ಗ ಮುಕ್ತತೆಯನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 8,10,12ರಂದು ರಾಮಾಪುರ ಮತ್ತು ಮಾಟಳ್ಳಿ ವಿದ್ಯುತ್ ಉಪ ಕೇಂದ್ರಗಳಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ವ್ಯತಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.