ಸಾಮೂಹಿಕ ವಿವಾಹ ಮುಂದೂಡಿಕೆ: ಸಾಲೂರು ಮಠದಲ್ಲಿ ವಿವಾಹವಾದ ನವ ಜೋಡಿಗಳು..
ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ.23 ರಂದು ಉಚಿತ ಸಾಮೂಹಿಕ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರದಿಂದ 28ಕ್ಕೆ ಮುಂದೂಡಲಾಗಿತ್ತು. ಈ ವೇಳೆಗೆ ಸುಮಾರು 65 ಜೋಡಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಇದರಿಂದ ಈಗಾಗಲೇ ಕೆಲವರು ಲಗ್ನ ಪತ್ರಿಕೆಯನ್ನು ಸ್ನೇಹಿತರು ಬಂಧು ಮಿತ್ರರಿಗೆ ಹಂಚಿದ್ದು, 28ರಂದು ಮದುವೆಗೆ ಆಗಮಿಸುವಂತೆ ತಿಳಿಸಿದ್ದರು. ಲಗ್ನ ಪತ್ರಿಕೆ ಮಾಡಿಸದ ಕೆಲವರು ವಿವಾಹಕ್ಕೆ ಆಗಮಿಸುವಂತೆ ಸಂಬಂಧಿಕರಿಗೆ 2 ಬಾರಿ ತಿಳಿಸಿದ್ದರು. ಆದರೆ ಪ್ರಾಧಿಕಾರ ಮುಂದೂಡಲಾದ ಮದುವೆ ದಿನಾಂಕವನ್ನು ನಿಗದಿಪಡಿಸಿ ಖಚಿತಪಡಿಸಿಲ್ಲ. ಇದರಿಂದ ವಧು- ವರರು ಹಾಗೂ ಕುಟುಂಬಸ್ಥರು ಗೊಂದಲಕ್ಕೆ ಒಳಗಾಗಬೇಕಾಯಿತು.
ಪ್ರಾಧಿಕಾರದ ಕಾರ್ಯವೈಖರಿಯಿಂದ ಬೇಸತ್ತ 7 ಕುಟುಂಬಸ್ಥರು ಜತೆಗೂಡಿ ವಧು-ವರರಿಗೆ ಸ್ವಂತ ಖರ್ಚಿನಿಂದಲೇ ಸಾಲೂರು ಮಠದಲ್ಲಿ ಮದುವೆ ಕಾರ್ಯ ನೆರವೇರಿಸಿದರು. ಜತೆಗೆ ಬೊಮ್ಮೇಶ್ವರ ದೇವಸ್ಥಾನ ದಲ್ಲೂ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ಒಂದು ಜೋಡಿಯ ಮದುವೆ ಯಾಯಿತು. ವಿವಾಹಕ್ಕಾಗಿ ಅರ್ಜಿ ಸಲ್ಲಿಸಿರುವ ವಧು ವರರು, ವಿವಾಹಕ್ಕೆ ಶೀಘ್ರ ದಿನಾಂಕ ನಿಗದಿಪಡಿಸಿ ಸಾಮೂಹಿಕ ವಿವಾಹವನ್ನು ನೆರವೇರಿ ಸುವಂತೆ ಒತ್ತಾಯಿಸಿದ್ದಾರೆ.