ಇಂಡಿ : ಜಾತ್ಯಾತೀತ ಸೋಗಿನಲ್ಲಿರುವರಿಗೆ ಈ ಭಾರಿ ತಕ್ಕ ಪಾಠ..! ಒಡೆದಾಳುವ ರಾಜಕಾರಣಿಗಳಿಗೆ ತಕ್ಕ ಶಿಕ್ಷೆ..! ಅವರ ಸೋಲು ಖಚಿತ ನಮ್ಮ ಗೆಲುವು ನಿಶ್ಚಿತ ಎಂದು ಮಹೇಬೂಬ್ ಅರಬ್ ಹೇಳಿದರು.
ಭಾನುವಾರ ಇಂಡಿ ಪಟ್ಟಣದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ತಾಲ್ಲೂಕು ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸ್ವತಂತ್ರ ಸಿಕ್ಕು ಸುಮಾರು ೭೦ ವರ್ಷಗಳು ಗತಿಸಿವೆ. ಆದರೆ ಇಲ್ಲಿಯವರೆಗೆ ಈ ಬಾಗದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಪಕ್ಷಗಳು ಅಹಿಂದ ವರ್ಗವನ್ನ ಮತಬ್ಯಾಂಕ್ ಯಾಗಿ ಮಾಡಿಕೊಂಡಿವೆ ವಿನಃ ಯಾವುದೇ ರಾಜಕೀಯ ಪ್ರಾತಿನಿಧ್ಯ ಕೊಡುವ ಪ್ರಯತ್ನ ಮಾಡಿಲ್ಲ. ಆದರೆ ಈ ಬಾರಿ ಎಸ್ಸಿ ಎಸ್ಟಿ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಒಮ್ಮತದ ಪ್ರತಿನಿಧಿಯಾಗಿ ೨೦೨೩ ರ ಇಂಡಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಿಲಿದ್ದೆನೆ, ಅಹಿಂದ ವರ್ಗದ ಮೇಲೆ ವಿಸ್ವಾಸವಿದೆ. ಅವರು ನನ್ನನು ಬೆಂಬಲಿಸುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗಿರಿ ಮುಲ್ಲಾ ಅವರು ಮಾತನಾಡಿ, ಕಾಂಗ್ರೆಸ ಪಕ್ಷದ ಸ್ಥಳೀಯ ಶಾಶಕರು ಸಾಮಾಜಿಕ ನ್ಯಾಯದಡಿ ದಲಿತ ಮುಸ್ಲಿಂ ಸಮುದಾಯಕ್ಕೆ ಪ್ರಾಧ್ಯನತೆ ನೀಡಿಲ್ಲ. ಇನ್ನೂ ಬಿಜೆಪಿ ಪಕ್ಷದ ಮುಸಲ್ಮಾನರ್ ವಿರೋಧಿ ನೀತಿಯನ್ನು ಯಾವತ್ತೂ ಪ್ರಶ್ನಿಸಿಲ್ಲ. ಆದರೆ ಮುಸ್ಲಿಮ್ಸ್ ಮತ ಪಡೆಯಲು ದುಂಬಾಲು ಬೀಳುತ್ತಾರೆ. ಇಲ್ಲಿಯವರೆಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಅವರ ರಾಜಕೀಯ ಭವಿಷ್ಯವನ್ನು ನಿರ್ನಾಮ ಮಾಡಿದ್ದಾರೆ.
ಭೀಮಾಶಂಕರ್ ಶುಗರ್ ಫ್ಯಾಕ್ಟರಿಯಲ್ಲಿ ನಿರ್ದೇಶಕ ಸ್ಥಾನವನ್ನು ಕೂಡಾ ನೀಡಿಲ್ಲ ಇಂತಹವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಅವರನ್ನು ಸಂಪೂರ್ಣ ವಾಗಿ ತೀರಸ್ಕಾರ ಮಾಡುವ ಮೂಲಕ ಸಮುದಾಯದ ವ್ಯಕ್ತಿಗೆ ಬೆಂಬಲಿಸಲು ಸೂಚಿಸಿದರು.
ಈ ಸಭೆಯಲ್ಲಿ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ ಶಿವಶರಣ, ಪ್ರಕಾಶ ಹೊಸಮನಿ, ಯಾಕುಬ ನಾಟಿಕಾರ, ಯಾಕೂಬ್ ಆಸ್ಥೆಕರ್, ಎಂ ಬಿ ಮಾಣಿಕ, ಸಿದ್ದಾರ್ಥ ಹಳ್ಳದಮನಿ, ಕೇತನ್ ಕಾಲೇಬಾಗ್, ಸಾಗರ ಕಾಳೆ, ಬಾಳು ಸುಲಾಖೆ ಹಾಗೂ ಅಹಿಂದ ಸಮುದಾಯದ ನೂರಾರು ಯುವಕರು ಮುಖಂಡರು ಭಾಗವಹಿಸಿದ್ದರು.