ಇಂಡಿ : ಭೀಮಾತೀರದ ಜನತೆ ಮುಗ್ದರು ಎಂದು ನಿವೃತ್ತ ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು. ಇಂಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಡಿ ಭಾಗದ ಜನರು ಹೃದಯವಂತರು, ಧೈರ್ಯವಂತರಾಗಿದ್ದಾರೆ.
ಯಾವುದೇ ಮುಲಾಜಿಲ್ಲದೇ ನಡೆದ ಘಟನೆ ಬಗ್ಗೆ ನೇರವಾಗಿ ಹೇಳಿ ಪೊಲೀಸರೊಂದಿಗೆ ಸಾತ್ ನೀಡುತ್ತಾರೆ. ಇದರಿಂದ ಭೀಮಾತೀರದ ಕೇಸ್‌ಗಳನ್ನು ಬೇಧಿಸಲು ಅನುಕೂಲ ಆಗುತ್ತದೆ ಎಂದರು. ಅಲ್ಲದೇ, ನಾನು ಜನತೆಯಿಂದ ಪಡೆದುಕೊಂಡಿದ್ದು ಬಹಳ ಇದೆ. ಜನರ ಸಹಕಾರವಿರದಿದ್ದರೆ ಏನು ಮಾಡಲೂ ಆಗುತ್ತಿರಲಿಲ್ಲ ಎಂದರು. ಅದಕ್ಕಾಗಿ ನಾನು ಭೀಮಾತೀರದದಿಂದ ನನ್ನ ರಾಜಕೀಯ ಆರಂಭ ಮಾಡುತ್ತೇನೆ ಎಂದರು. ಅದಕ್ಕಾಗಿ ನಿಮ್ಮ ಸಹಕಾರ, ಪ್ರೀತಿ ವಿಶ್ವಾಸ ಬೇಕಿದೆ. ಎಂದರು.