ಇಂಡಿ : ನಿಂಬೆನಾಡಿನಲ್ಲಿ ಬೈಕ್ ಕಳ್ಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಗರಖೇಡ ರಸ್ತೆಯಲ್ಲಿ ನಡೆದಿದೆ. ಮೂಲತಃ ಕಲಬುರಗಿ ಜಿಲ್ಲೆಯ ಕೊಗನೂರ ಗ್ರಾಮದ ನಿವಾಸಿ ಅನಿಲ ಹನಮಂತ ಕ್ಷತ್ರಿ (21) ಬಂಧಿತ ಆರೋಪಿ. ಈತ ಪಟ್ಟಣದ ಬೈಕ್ನಲ್ಲಿ ಅನುಮಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವೇಳೆಯಲ್ಲಿ ಪೊಲೀಸ ತಪಾಸಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದ ಕಾರಣಕ್ಕೆ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ ವೇಳೆಯಲ್ಲಿ ಬೈಕ್ಗಳನ್ನು ಕಳ್ಳತನ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ. ಬೈಕ್‌ಗಳ್ಳ ಅನಿಲ ಲಕ್ಷಾಂತರ ಮೌಲ್ಯದ 7 ಬೈಕ್ ಕಳ್ಳತನವನ್ನು ಮಾಡಿದ್ದಾನೆ. ಈ ಬಗ್ಗೆ ಇಂಡಿ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















