ಲಿಂಗಸೂಗೂರು: ಇಸ್ಪೀಟ್ ಆಡುತ್ತಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿ 4 ಲಕ್ಷ 15, 770 ರೂ. ನಗದು ಹಣ ಹಾಗೂ ನಾಲ್ಕು ಕಾರು, ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹೋಬಳಿಯ ಬ್ಯಾಲಿಹಾಳ ಹಳ್ಳದ ಪಕ್ಕದಲ್ಲಿ ನಾಲ್ಕು ಜನರ ತಂಡ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಬಸವರಾಜ ನಾಲತವಾಡ, ಶರಣಬಸವ, ಬಸರಾಜ ತೋಡಗೇರ, ದೇವಕುಮಾರ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.