ಬೆಂಗಳೂರು: ಅಪಹರಣ, ಹಲ್ಲೆ, ಸುಲಿಗೆಗೆ ದರೋಡೆಕೋರರು ತಂಡವನ್ನು ಕಟ್ಟಿಕೊಂಡು ಕುಕೃತ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ನಡೆದಿದೆ.
ಮೊಹಮ್ಮದ್ ಆಶಿಕ್ ಮತ್ತು ಇಸಾಕ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇಬ್ಬರು ಆರೋಪಿಗಳು ಕರಾವಳಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ ತಿಂಗಳ ಕೊನೆಯಲ್ಲಿ ಯುವಕನೊಬ್ಬನನ್ನು ಕಾರು ಸಮೇತ ಅಪಹರಣ ಮಾಡಿ ದುಷ್ಕರ್ಮಿಗಳು ಹಣ ಸುಲಿಗೆ ಮಾಡಿದ್ದರು. ಅಲ್ಲದೆ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದರು. ಕೊತ್ತನೂರು ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಜಕ್ಕೂರು ಬಳಿ ಬಂಧಿಸಿದ್ದಾರೆ.