ಪೊಲೀಸ್ ಇಲಾಖೆ ಎಲ್ಲರ ಹಿತ ಕಾಪಾಡುತ್ತದೆ:ಸಿ.ಪಿ.ಐ.
ಅಫಜಲಪುರ:ಕಾನೂನು ಪ್ರತಿಯೊಬ್ಬರಿಗೂ ಸಮಾನವಾಗಿದೆ ಹೀಗಾಗಿ ಪ್ರತಿಯೊಬ್ಬರು ಕಾನೂನು ತಿಳಿಯುವ ಮೂಲಕ ಸೌಹಾರ್ಧಯುತ ಬದುಕು ನಡೆಸಬೇಕು.ಪೊಲೀಸ್ ಇಲಾಖೆ ಎಲ್ಲ ಜನರ ಹಿತ ಕಾಪಾಡುತ್ತದೆ ಎಂದು ಸಿಪಿಐ ಲಖನ್ ಮಸಗುಪ್ಪಿ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು,ನಾನು ಹೊಸದಾಗಿ ಅಫಜಲಪುರ ವೃತ್ತಕ್ಕೆ ಕರ್ತವ್ಯಕ್ಕೆ ಬಂದಿದ್ದೇನೆ ನಿಮ್ಮೆಲ್ಲರ ಸಹಕಾರ ಬಹಳ ಅಗತ್ಯವಾಗಿದೆ.
ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ದಲಿತ ಸಮುದಾಯಯದ ಪ್ರಮುಖರೊಂದಿಗೆ ಸಂಪರ್ಕಕ್ಕೆ ಬರಲಾಗಿದೆ.ಮುಂಬರುವ ದಿನಗಳಲ್ಲಿ ತಾಲೂಕಿನೆಲ್ಲಡೆ ಸಂಚರಿಸಿ ದಲಿತ ಸಮೂದಾಯದವರ ವಾಸ್ತವತೆ ಅರಿತುಕೊಳ್ಳುವ ಮತ್ತು ಅವರಿಗೆ ಕಾನೂನು ರಕ್ಷಣೆ ಮಾಡುವ ಕೆಲಸ ಇಲಾಖೆ ಮಾಡಲಿದೆ.
ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ನೇರವಾಗಿ ಪೊಲೀಸ್ ಇಲಾಖೆಗೆ ಸಂಪರ್ಕಿಸಬೇಕು ಎಂದರು.
ಪಿಎಸ್‌ಐ ಸೊಮಲಿಂಗ ಒಡೆಯರ್ ಮಾತನಾಡಿ ಇಲಾಖೆ ಕಾನೂನಿನ ಮೂಲಕ ನಿರಂತರವಾಗಿ ನೊಂದವರಿಗೆ ನ್ಯಾಯ ಕೊಡಿಸುವ ಮತ್ತು ದೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ತಾವುಗಳು ನಮ್ಮೊಂದಿಗೆ ಸದಾ ಸಹಕಾರದಿಂದ ಇರಬೇಕು ಎಂದರು.
ದಲಿತ ಮುಖಂಡರಾದ ಭೀಮರಾವ ಗೌರ, ಗೌತಮ ಸಕ್ಕರಗಿ ಮಾತನಾಡಿ ತಾಲೂಕಿನಲ್ಲಿ ದಲಿತ ಸಮುದಾಯ ನೆಮ್ಮದಿಯಿಂದ ನಿರ್ಭಯವಾಗಿ ಇರುವಂತ ವಾತಾವರಣ ಇಲಾಖೆ ಸೃಷ್ಟಿಸಿದೆ. ನಾವು ಕೂಡ ಸದಾ ಇಲಾಖೆಯೊಂದಿಗೆ ಸಹಕಾರ ಭಾವನೆಯೊಂದಿಗೆ ಇದ್ದು ಕಾನೂನು ಪಾಲನೆ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ದಲಿತ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಕಾನೂನಿನ ನಂಬಿಕೆ, ಭರವಸೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಕ್ರೈಂ ಪಿಎಸ್‌ಐ ಶಾಂತಮಲ್ಲಪ್ಪ, ಮುಖಂಡರಾದ ಮಹಾನಿಂಗ ಅಂಗಡಿ, ಮಲ್ಲಿಕಾರ್ಜುನ ಖರ್ಗೆ ಅತನೂರ, ಮಹಾಂತೇಶ ಬಡದಾಳ, ರವಿ ಗೌರ, ಶಿವರಾಜ ಹೊಸಮನಿ, ಪ್ರವೀಣ ಕಲ್ಲೂರ, ದತ್ತು ಭಂಕಲಗಿ, ಶರಣು ಕೊಳಿಗೇರಿ, ಅವ್ವಣ್ಣ ಸಂಗಮಕರ್, ಕುಮಾರ ಕೊಳಿಗೇರಿ, ಪಿಂಟು ಹೊಳಿಕೇರಿ ಸೇರಿದಂತೆ ಅನೇಕರು ಇದ್ದರು



















