ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ ; ಶೀವು ಹೂಗಾರ
ಇಂಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ, ಅದಲ್ಲದೇ ಸಹಕಾರ ಸಂಘಗಳು ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವುಗಳನ್ನು ಉಳಿಸಿ ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಶೀವು ಹೂಗಾರ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022/23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ತತ್ವದ ಉದ್ದೇಶಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಹಕಾರ ಸಂಘದಲ್ಲಿ ಯಾರೂ ಸಹ ತಾವು ಯಾವುದೇ ವೈಯಕ್ತಿಕ ಲಾಭ ಪಡೆಯಲು ಪ್ರಯತ್ನಿಸಬಾರದು. ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ ಆದ್ದರಿಂದ ಸಹಕಾರ ಸಂಘಗಳಲ್ಲಿ ಇನ್ನಿತರ ಹಸ್ತಕ್ಷೇಪ ಮಾಡದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಪರಶುರಾಮ ಹತ್ತರಕಿ ಅಧ್ಯಕ್ಷತೆ ವಹಿಸಿ ಮಾತಾನಾಡಿ ಅವರು, ಸಹಕಾರಿ ಸಂಘದ ಬೆಳವಣಿಗೆಗೆ ಪರಸ್ಪರ ಸಹಕಾರ ಮುಖ್ಯ. ಆದರೆ ನಮ್ಮ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮಲ್ಲರ ಸಹಕಾರ ಕಾರಣವಾಗಿದೆ. ಮುಂಬರುವ ವರ್ಷದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಿ ಹೆಚ್ಚಿನ ಸೇವೆ ನೀಡುವಲ್ಲಿ ಶೇರುದಾರರು ಸಹಕರಿಸಲು ಕೋರುತ್ತೆನೆ. ಅಭಿವೃದ್ಧಿಪರ ಚಟುವಟಿಕೆಗಳಾದ ವ್ಯಾಪಾರ ಅಭಿವೃದ್ಧಿ ಯೋಜನೆ, ಕಿಸಾನ್ ಕಾರ್ಡ ಯೋಜನೆ, ಟ್ಯಾಕ್ಟರ್ ಸಾಲ, ಪೈಪಲೇನ್ ಸಾಲ ಜೊತೆಗೆ ಇತರೆ ಯೋಜನೆಗಳಿ ಪರಿಣಾಮಕಾರಿ ಅನುಷ್ಠಾನಗೊಳಿಸಿ ಮುಂದುವರೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಟ್ಟೆಪ್ಪ ಪೂಜಾರಿ, ಮೋದಿನಸಾಬ್ ಬಾಗವಾನ, ನೀಲಮ್ಮ ಜಮಾದಾರ, ಹಣಮಂತ ಮಸಳಿ, ಹಣಮಂತ ಲಚ್ಯಾಣ, ಜೆಟ್ಟಪ್ಪ ವಂದಾಲ, ರಾಮಣ್ಣ ಚೀಲಿ, ಶ್ರೀದೇವಿ ಹಲಸಂಗಿ, ಜೆಟ್ಟಪ್ಪ ತಳಕೇರಿ, ಶಿವಕಾಂತವ್ವ ಉಪ್ಪಾರ, ಸೋಮಲಿಂಗಯ್ಯ ಮಠಪತಿ, ಮಾಳಪ್ಪ ಮಾದರ, ತಾಂಬಾ ಶಾಖೆಯ ಕ್ಷೇತ್ರ ಅಧಿಕಾರಿ ಹಾಗೂ ಸದಸ್ಯರು ರೈತರು ಉಪಸ್ಥಿತರಿದ್ದರು.