ಇಂಡಿ: ಅಂಗವಿಕಲರು ಗುಡುಗಿದರೆ ವಿಧಾನಸಭೆ ನಡುಗುತ್ತೆ,ಅನುಕಂಪ ಬೇಡ ಅವಕಾಶ ಕೊಡಿ, ಅಂಗವಿಕಲರನ್ನು ಕಡೆಗಣಿಸಿದರೆ, ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೆವೆ ಎಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲ ಹಾಗೂ ಪಾಲಕರ ಒಕ್ಕೂಟ ಘಟಕದ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟಸಿ ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡಾದೆ ಅವರ ಮೂಲಕ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಾಲ್ಲೂಕು ಅಧ್ಯಕ್ಷ ಎಸ್ ಎಮ್ ಮಕಾನದಾರ ಮಾತಾನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಸುಮಾರು 13 ಲಕ್ಷಗಳಷ್ಟು ಜನರು ಅಂಗವಿಕಲರು ಇದ್ದರು. ಆದರೆ 2018 ಅಂಗವಿಕಲರ ಕಾಯ್ದೆಯ ಪ್ರಕಾರ 21 ವಿವಿಧ ರೀತಿಯ ಅಂಗವಿಕಲರು ಒಳಗೊಂಡತೆ ರಾಜ್ಯದಲ್ಲಿ ಸುಮಾರು 20 ಲಕ್ಷಗಳಷ್ಟು ಜನ ಅಂಗವಿಕಲರು ಇದ್ದಾರೆ. ಇಂದಿನ ದುಬಾರಿ ದುನಿಯಾದಲ್ಲಿ ಅಂಗವಿಕಲರು ಜೀವನ ಸಾಗಿಸುವದು ಕಷ್ಟದ ವಿಷಯವಾಗಿದೆ. ಆದರೆ 2022-23 ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಅಂಗವಿಕಲರಿಗೆ ಯಾವುದೇ ಹೊಸ ಸೌಲಭ್ಯಗಳನ್ನು ಮತ್ತು ಮಾಶಾಸನ ಹೆಚ್ಚಳ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು. ಅಲ್ಲದೇ ಬಜೆಟ್ ನಲ್ಲಿ ಬಿಟ್ಟು ಹೋಗಿರುವ ಅಂಗವಿಕಲರ ಸೌಲಭ್ಯಗಳನ್ನು ಪೂರಕ ಬಜೆಟನಲ್ಲಿ ಅಳವಡಿಸಿ ಅಂಗವಿಕಲರ ಜೀವನಕ್ಕೆ ಮಾಶಾಸನವನ್ನು ಹೆಚ್ಚಳ ಮಾಡುವದರ ಜೊತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಅಂಗವಿಕಲರ ಹೋರಾಟಕ್ಕೆ ಬೆಂಬಲ ನೀಡಿ ಮಾತಾನಾಡಿದರು. ಈ ಸರಕಾರಕ್ಕೆ ಕಣ್ಣು ಕಿವಿ ಇಲ್ಲ ಎಂದು ಲೇವಡಿ ಮಾಡಿದರು. ಇಂಡಿ ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ಸುಮಾರು 42 ದಿನಗಳು ಕಾಲ ಧರಣಿ ಸತ್ಯಾಗ್ರಹ ಮಾಡಿದರೂ ಸರಕಾರಕ್ಕೆ ಕಾಣಿಸಲಿಲ್ಲ, ಕೇಳಿಸಿಲಿಲ್ಲ ಮತ್ತು ಸ್ಪಂದಿಸುವ ಗುಣಧರ್ಮವೂ ಕಾಣಲಿಲ್ಲ ಎಂದರು. ಆದರೆ ಅಂಗವಿಕಲ, ರೈತರ, ಕೂಲಿ ಕಾರ್ಮಿಕರನ್ನು ಕಡೆಗಾಣಿಸಿದ್ರೆ ಭವಿಷ್ಯದಲ್ಲಿ ಉತ್ತಮವಾದ ಪಾಠ ಕಲಿಯಬೇಕಾಗುತ್ತೆದೆ ಎಂದು ಹೇಳಿದರು.
ಬೇಡಿಕೆಗಳು :-
2021 ರ ವಿಧಾನ ಪರಿಷತನಲ್ಲಿ ಚರ್ಚೆಯಾಗಿರುವ ಅಂಗವಿಕಲರಿಗೆ ಈಗ ನೀಡುತ್ತಿರುವ ಮಾಶಾಸನ 1400 ಮತ್ತು 800 ರಿಂದ 6000 ರೂ ಗಳ ಹೆಚ್ಚಳ ಮಾಡಬೇಕು.
1 : ದಿವ್ಯಾಂಗ ಯುವಕ, ಯುವತಿಯರು ರಾಜ್ಯಾದ್ಯಾಂತ ಸರ್ಕಾರಿ ಕೆಲಸ ಪಡೆಯುಂತಾಗಬೇಕು.
2 : ರಾಜ್ಯದ ಅಂಗವಿಕಲ ವ್ಯಕ್ತಿಗಳ ಮನೆಗಳಿಗೆ 40 ಯುನಿಟಗಳ ಏದ್ಯುತಚ್ಛಕ್ತಿ ಉಚಿತವಾಗಿ ನೀಡಬೇಕು.
3 : ಹರಿಯಾಣ ಸರ್ಕಾರದ ಮಾದರಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ, ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಸಂಘದ ಉಪಾಧ್ಯಕ್ಷ ನಿಂಗರಾಜ ಬಸನಾಳ, ಶಿವಲಿಂಗಪ್ಪ ನಾಯ್ಕೊಡಿ, ಸುಮಯ್ಯ ಮೋಮಿನ, ಬಾಬು ಸಂಗೋಗಿ, ನೂರ ಅಹ್ಮದ್ ಪಠಾಣ, ಭರಮಣ್ಣ ಪೂಜಾರಿ, ಬಸವರಾಜ ಸೊನ್ನ, ಸಿದ್ದು ಗುಲೆ, ರೇಖಾ ಕ್ಷೇತ್ರಿ, ಸೀತಾ ಪೂಜಾರಿ, ಪಾಂಡು ರಾಠೋಡ, ಕನ್ನಯ ಸಿಂಗ್ ಹಜಾರೆ, ಶಿವಾನಂದ ಏಳಗಿ, ಈರಣ್ಣ ಡಂಗಿ, ಪರಶುರಾಮ ಪೂಜಾರಿ, ಭೀಮಶ್ಯಾ ಹೊಸಮನಿ, ಲಕ್ಷ್ಮಣ್ಣ ಚವ್ಹಾಣ, ವಿಲಾಸ ಶಿವಶರಣ, ಸಂಜೀವ, ನೀಲಾಬಾಯಿ,ಜಾಫರ,ಸುಭಾಷ, ಕಮಲಾಬಾಯಿ, ಮೈಬೂಬ ಇನ್ನೂ ಅನೇಕರು ಉಪಸ್ಥಿತರು.