VOJ ನ್ಯೂಸ್ ಡೆಸ್ಕ್: ಕಳೆದ 18 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಉಡುಪಿಯಲ್ಲಿ ಕೆಲವು ಪೆಟ್ರೊಲ್ ಬಂಕ್‌ಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್ ಆರ್ ಹಾಗೂ ನಯರಾ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿವೆ. ಕಳೆದ 15 ದಿನಗಳ ಅವಧಿಯಲ್ಲಿ ಹಂತ ಹಂತವಾಗಿ ಒಂದೊಂದೇ ಪೆಟ್ರೋಲ್ ಬಂಕ್ ಸೇವೆ ಸ್ಥಗಿತಗೊಳಿಸಿವೆ. ಇದಕ್ಕೆ ಡೀಲರ್‌ಗಳ ಮತ್ತು ಪೂರೈಕೆದಾರರ ನಡುವಿನ ವೈಮನಸ್ಯ ಕೂಡ ಕಾರಣ ಎನ್ನಲಾಗಿದೆ. ಇದರಿಂದಾಗಿ ಸ್ಥಳೀಯ ವಾಹನ ಸವಾರರು ಪರಾದಡುವ ಸ್ಥಿತಿ ಎದುರಾಗಿದೆ.