VOJ ನ್ಯೂಸ್ ಡೆಸ್ಕ್: ವಿಧಾನಸಭೆ ಚುನಾವಣೆ ಮುಗಿದಿರುವ ಕಾರಣ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಪ್ರಕ್ರಿಯೆ ಮುಂದುವರಿದಿದೆ. ಕಳೆದ ಆರು ದಿನಗಳಲ್ಲಿ ಇದೀಗ ಐದನೇ ಬಾರಿ ದರ ಹೆಚ್ಚಳ ಮಾಡಲಾಗಿದೆ. ಇಂದು ಪೆಟ್ರೋಲ್ ದರ ಲೀಟರ್ ಗೆ 50 ಪೈಸೆ ಹೆಚ್ಚಳ ಮಾಡಲಾಗಿದೆ. ಡೀಸೆಲ್ ದರ ಲೀಟರ್ ಗೆ 55 ಪೈಸೆ ಹೆಚ್ಚಾಗಿದೆ. ಇದರಿಂದಾಗಿ ಕಳೆದ ಆರು ದಿನಗಳಲ್ಲಿ ತೈಲ ಉತ್ಪನ್ನ ದ ಒಟ್ಟಾರೆಯಾಗಿ 3.70 ರೂಪಾಯಿ ಏರಿಕೆ ದಾಖಲಿಸಿದೆ. ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿದೆ.