ಶ್ರೀ ಮಹದೇಶ್ವರ ಕಾರು ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ತಹಸಿಲ್ದಾರ್ ಗೆ ಮನವಿ
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು: ಪಟ್ಟಣದ ಸರ್ಕಾರಿ ಜಾಗದಲ್ಲಿ ಕಾರು ನಿಲ್ದಾಣಕ್ಕೆ ಅನುವು ಮಾಡಿಕೊಡಬೇಕೆಂದು ತಾಸಿಲ್ದಾರ್ ಶ್ರೀಮತಿ ಚೈತ್ರ ರವರಿಗೆ ಶ್ರೀ ಮಹದೇಶ್ವರ ಚಾಲಕ ಹಾಗೂ ಮಾಲಿಕ ಸಂಘದ ಅಧ್ಯಕ್ಷರಾದ ನಾಗೇಂದ್ರ ಹಾಗೂ ಸದಸ್ಯರುಗಳು ಮನವಿಯನ್ನು ಸಲ್ಲಿಸಿದರು.
ಹನೂರು ಪಟ್ಟಣದಲ್ಲಿ ರಸ್ತೆ ಅಗಲೀಕರಣವಾದ ಕಾರಣ ಸರ್ಕಾರಿ ಶಾಲೆ ಮುಂದೆ ಇದ್ದ ಕಾರು ನಿಲ್ದಾಣವನ್ನು ತೆರುವುಗೊಳಿಸಲಾಗಿದ್ದು, ಇದರಿಂದ ಜೀವನ ನಡೆಸಲು ತುಂಬಾ ಕಷ್ಟವಾಗಿದ್ದು, ಆದುದರಿಂದ ನಮಗೆ ಒಂದು ಸೂಕ್ತ ಜಾಗವನ್ನು ಸಬ್ ರಿಜಿಸ್ಟರ್ ಆಫೀಸ್ ಮುಂಬಾಗ, ಅಥವಾ ಸರ್ಕಾರಿ ಹಾಸ್ಪಿಟಲ್ ಮುಂಭಾಗ, ಅಥವಾ ಕೆಎಸ್ಆರ್ಟಿಸಿ ಸ್ಟ್ಯಾಂಡ್ ಮುಂಭಾಗ, ಇಲ್ಲವಾದಲ್ಲಿ ಖಾಲಿ ಇರುವ ಜಾಗವನ್ನು ಕಾರು ನಿಲ್ದಾಣಕ್ಕೆ ಮಂಜೂರು ಮಾಡಿಕೊಡಬೇಕಾಗಿ ಶ್ರೀ ಮಹದೇಶ್ವರ ಕಾರು ಚಾಲಕರು ಹಾಗೂ ಮಾಲೀಕರು ಮನವಿಯನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಕಾರು ಚಾಲಕ ಹಾಗೂ ಮಾಲೀಕ ಸಂಘದ ಅಧ್ಯಕ್ಷರಾದ ಎಂ ನಾಗೇಂದ್ರ , ಉಪಾಧ್ಯಕ್ಷ ಸುರೇಶ್ ಕುಮಾರ್ , ಸಂಘಟನಾ ಕಾರ್ಯದರ್ಶಿ ಮಹದೇವಪ್ಪ, ಸೈಕಲ್ ಶಾಪ್ ರಾಜೇಶ್, ಮಂಗಲ ಮೂರ್ತಿ, ಸದಸ್ಯರುಗಳಾದ ರುದ್ರ, ನಾಗೇಂದ್ರ, ಗಿರೀಶ್, ಸುನಿಲ್, ಮಂಜ, ನಾಗೇಂದ್ರ ಯಾದವ್, ಸುನಿಲ್, ತ್ಯಾಗರಾಜ್, ಕಿರಣ್ ಕುಮಾರ್, ಹರ್ಷಿತ್, ಇನ್ನು ಮುಂತಾದವರು ಹಾಜರಿದ್ದರು.



















