ಸರಕಾರಿ ನೌಕರರಿಂದ ಶಾಸಕರಿಗೆ ಮನವಿ
ಎನ್ ಪಿ ಎಸ್ ರದ್ದತಿಗೆ ಆಗ್ರಹಿಸಿ ಶಾಸಕ ಪಾಟೀಲ್ ರಿಗೆ ಮನವಿ
ಇಂಡಿ: ತಾಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ
ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಮತ್ತು
ಸದಸ್ಯರು ಸೇರಿ ಸೋಮವಾರ ಪ್ರವಾಸಿ ಮಂದಿರದಲ್ಲಿ
ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಮನವಿ
ಸಲ್ಲಿಸಿದರು.
ವಿಜಯಪುರ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ
ಸುರೇಶ ಶೇಡಶ್ಯಾಳ ಮಾತನಾಡಿ, ರಾಜ್ಯ 7 ನೇ ವೇತನ
ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರಕಾರಿ
ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ
ಪರಿಷ್ಕರಿಸಿ ಆದೇಶ ಹೊರಡಿಸಬೇಕು, ಈಗಾಗಲೇ ನೀಡಿರುವ ಶೇ 17 ಮಧ್ಯಂತರ ಪರಿಹಾರ ಭತ್ಯೆಯೂ ಸೇರಿದಂತೆ ಶೇ 40 ಫಿಟ್ ಮೆಂಟ್ ಸೌಲಭ್ಯವನ್ನು ರಾಜ್ಯ ಸರಕಾರಿ ನೌಕರರು ಹಾಗೂ ಸರಕಾರದ ಅಧೀನಕ್ಕೆ ಒಳಪಡುವ ನೌಕರರಿಗೆ ದಿನಾಂಕ 1 ಜುಲೈ 2022 ರಿಂದ ಜಾರಿಗೆ ಬರುವಂತೆ ಸರಕಾರ ಆದೇಶ ಹೊರಡಿಸುವದು, ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವದು, ಮತ್ತು ನೌಕರರ ಕುಟುಂಬಗಳಿಗೆ ಆರೋಗ್ಯ ಸಂಜೀವಿನಿ ಅನುಷ್ಠಾನಗೊಳಿಸುವದು ಎಂಬ ಬೇಡಿಕೆಗೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ
ಯಶವಂತರಾಯಗೌಡ ಪಾಟೀಲರು ಬರುವ ಫೆಭ್ರುವರಿ
12 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ.
ಅಧಿವೇಶನದಲ್ಲಿ ನೌಕರರ ಬೇಡಿಕೆ ಪರವಾಗಿ ವಿಧಾನಸಭೆ
ಮಾತನಾಡುವೆ, ಜೊತೆಗೆ ಶಿಕ್ಷಣ ಸಚಿವರಿಗೆ ಮತ್ತು
ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆ ಕುರಿತು
ಮನವರಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ
ಮಾಡುತ್ತೇನೆ ಎಂದರು.
ನೌಕರರ ಸಂಘದ ಅಧ್ಯಕ್ಷ ಎಸ್.ಡಿ. ಪಾಟೀಲ, ಬಸವರಾಜ ಗೊರನಾಳ ಮಾತನಾಡಿದರು. ಇಂಡಿ ಘಟಕದ ರಾಜ್ಯ ಸರಕಾರಿ ನೌಕರರ ಸಂಘದ ಜಿ.ಜಿ.
ಬರಡೋಲ, ಬಿ.ಎಂ. ಅಂಜುಟಗಿ, ಶ್ರೀಮತಿ ಪಿ.ಎಂ. ಬಜಂತ್ರಿ, ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಬಿ.ಎಂ. ಬಬಲಾದ, ಎಸ್.ಎನ್. ಕೋಳಿ, ಎಚ್.ಎಚ್. ಗುನ್ನಾಪುರ, ಸುನೀಲ ಪಾಟೀಲ, ಆರ್.ವಿ. ಪಾಟೀಲ, ಎಸ್.ಬಿ. ಕಲ್ಲೊಳ್ಳಿ ಸೇರಿದಂತೆ ತಾಲೂಕಾ ಎನ್.ಪಿ.ಎಸ್ ಅಧ್ಯಕ್ಷರು ಸರ್ವ ಸದಸ್ಯರು, ಪದಾಧಿಕಾರಿಗಳು, ಜಿ.ಪಿ.ಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇಂಡಿ: ತಾಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು 7 ನೇ ವೇತನ ಆಗ್ರಹಿಸಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.