ಪೆನ್‌ಡ್ರೈವ್ ಪ್ರಕರಣ ಕೇಂದ್ರದ ಮೇಲೆ ಎಂ ಬಿ ಪಾಟೀಲ ವಾಗ್ದಾಳಿ..!
ವಿಜಯಪುರ; ಅಚ್ಚೇ ದಿನ್ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ ಬಿ ಪಾಟೀಲ ಕಿಡಿಕಾರಿದರು. ವಿಜಯಪುರ ನಗರದಲ್ಲಿ ಮಂಗಳವಾರ 12 ಗಂಟೆಗೆ ಮಾಧ್ಯಮದ ಎದುರು ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಅಚ್ಚೆ ದಿನ್ ಬರಲಿವೆ ಎಂದರು. ಅಲ್ಲದೇ, ಪ್ರಜ್ವಲ್ ಪೆನ್‌ಡ್ರೈವ್ ವಿಚಾರದಲ್ಲಿ ಕಾನೂನಿಗೆ ಪ್ರಜ್ವಲ್ ರೇವಣ್ಣ ಹಾಜರಾಗಬೇಕು. ಕಾನೂನಿಗೆ ತಲೆಬಾಗಬೇಕು. ಪ್ರಜ್ವಲದ್ದು ಅತಿರೇಕದ ಹೇಯ ಕೃತ್ಯ ಆಗಿದೆ. ಕಠಿಣವಾದ ಶಿಕ್ಷೆ ಕಾನೂನು ಪ್ರಕಾರ ಆಗಲಿದೆ. ಈ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದೆ ಹೆಣ್ಣುಮಕ್ಕಳು, ತಾಯಂದಿರು ವಿರೋಧವಾಗಿದ್ದಾರೆ. ಪ್ರಜ್ವಲ್ ಸರೆಂಡರ್ ಆಗದೆ ಇರೋದಕ್ಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಕಾರಣ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ನೋಟಿಸ್ ಕೊಡಬೇಕಿತ್ತು. ಲುಕ್‌ಔಟ್, ರೆಡ್ ಕಾರ್ನರ್ ನೋಟಿಸ್ ಕೊಡಬೇಕಿತ್ತು. ವಿದೇಶಾಂಗ ಸಚಿವರು ರಾಜ್ಯ ಸರ್ಕಾರದಲ್ಲಿ ಇರ್ತಾರಾ ವಿಜಯ ಮಲ್ಯಾಗೆ ರಾಜ್ಯ ಸರ್ಕಾರ ನೋಟಿಸ್ ಕೊಡ್ತಾರಾ?ಎಂದು ಕೇಂದ್ರ ಮೇಲೆ ಎಂ ಬಿ ಪಾಟೀಲ ವಾಗ್ದಾಳಿ ನಡೆಸಿದರು. ಪ್ರಕರಣ ಡೈವರ್ಟ್ ಮಾಡಲು ಹಾಗೇ ಹೇಳ್ತಿದ್ದಾರೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಸ್ಪಷ್ಟನೆ ಕೊಡ್ತಾರೆ.
ಅವರು ಸ್ಪಷ್ಟನೆ ಕೊಡಬೇಕು ಎಂದರು.