ಗೌರಿ ಗಣೇಶ ಹಬ್ಬದ ನಿಮಿತ್ತ ಪೂರ್ವಭಾವಿ ಸಭೆ..
ಹನೂರು: ನಮ್ಮ ಹಬ್ಬಗಳು ಸಂಸ್ಕೃತಿ, ಸಂಸ್ಕಾರ , ಪರಂಪರೆಯನ್ನು ಉಳಿಸುವ, ಬೆಳೆಸುವಂತಾಗಬೇಕು ವಿನಃ ಶಾಂತಿ ಸೌಹಾರ್ದತೆ ಕದಡುವ ಅಥವಾ ಯಾವುದೇ ಸಮಸ್ಯೆಯನ್ನು ಉಂಟುಮಾಡುವಂತೆ ಯಾಗಬಾರದು. ಒಂದು ವೇಳೆ ಕೆಟ್ಟ ವಿಚಾರಳಿಗೆ ಸ್ಪಂದಿಸಿದ್ರೆ ಸರಕಾರದ ನಿಯಮಾನುಸಾರ ಕಾನೂನಿನ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಪಿಐ ಶಶಿಕುಮಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವೃತ್ ನಿರೀಕ್ಷಕ ಶಶಿಕುಮಾರ್ ರವರ ಮಾರ್ಗದರ್ಶನದಲ್ಲಿ ಸಭೆ ಜರುಗಿತು. ಇನ್ನೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೃತ್ತ ನಿರೀಕ್ಷಕ ಶಶಿಕುಮಾರ್ ರವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ವೇಳೆ ಹಾಗೂ ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನೆಡೆದಂತೆ ನೋಡಿಕೊಳ್ಳಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಲ್ಲಿ ಏಕಗವಾಕ್ಷಿ ಕೇಂದ್ರದಲ್ಲಿ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು.
ಅನುಮತಿ ಪಡೆಯದೆ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಧ್ವನಿವರ್ಧಕವನ್ನು ಉಪಯೋಗಿ – ಸುವವರು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕವನ್ನು ಉಪಯೋಗಿಸ ಬಾರದು ಎಂದು ಮಾಹಿತಿಯನ್ನು ನೀಡಿದರು. ಹಾಗೂ ಗಣೇಶ ಮೂರ್ತಿಯ ವಿಸರ್ಜನೆ ಯನ್ನು ಸಂಜೆ 6:00 ಒಳಗೆ ಮೂರ್ತಿ ವಿಸರ್ಜಿಸಬೇಕು. ಆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಗೆ ಸರಹದ್ದಿಗೆ ಬರುವಂತಹ ಗ್ರಾಮಗಳ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..