ಸಕಾಲದಲ್ಲಿ ಸಾಲ ಮರುಪಾವತಿಸಿ
ಇಂಡಿ : ರೈತರ ತಾವು ಪಡೆದ ಬ್ಯಾಂಕಿನ ಸಾಲಗಳನ್ನು ಸಕಾಲದಲ್ಲಿ ಮರು ಪಾವತಿಸಿದರೆ, ಮತ್ತೇ ಮರಳಿ ಬೇಗ ಸಾಲ ಪಡೆಯಲು ಸಾಧ್ಯ ಮತ್ತು ರೈತರಿಗೆ ಬ್ಯಾಂಕಿನ ಸೌಲಭ್ಯ ಪಡೆಯಲು ಸಹಾಯವಾಗುತ್ತದೆ ಎಂದು ಇಂಡಿ ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕ ಸುನೀಲ ಪರಿಮಳ ಹೇಳಿದರು.
ಅವರು ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ರೈತರ ಸಾಲ ಮರು ಪಾವತಿ ಬ್ಯಾಂಕಿನ ಸಾಲದ ಸೌಲಭ್ಯಗಳು ಮತ್ತು ವಿವಿಧ ಯೋಜನೆಗಳ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ಯಾಂಕಿನ ಕೃಷಿ ಅಧಿಕಾರಿ ಪರಶುರಾಮ ತೆನಹಳ್ಳಿ ಮಾತನಾಡಿ, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಒಳ್ಳೆಯದು, ಇಲ್ಲದಿದ್ದರೆ ಕ್ರೇಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಹೀಗಾಗಿ ಮುಂದೆ ಸಾಲ ಪಡೆಯಲು ತೊಂದರೆಯಾಗುತ್ತದೆ. ಕೃಷಿ ಸಲುವಾಗಿ ರೈತರಿಗೆ ಬಂಗಾರದ ಒಡವೆ, ಉನ್ನತ ಶಿಕ್ಷಣ ಪಡೆಯಲು, ಮನೆ ಕಟ್ಟಲು, ವಿವಿಧ ಯೋಜನೆಯಡಿಯಲ್ಲಿ ಸಾಲ ನೀಡುತ್ತಿದ್ದು, ಬ್ಯಾಂಕ್ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ವಿಜಯಪುರ ಎಸ್ ಬಿ ಐ ಬ್ಯಾಂಕಿನ ಮುಖ್ಯ ಪ್ರಬಂಧಕ ಕೃಷ್ಣಯ್ಯ ಮತ್ತು ಗುರುರಾಜ ಮಾತನಾಡಿ ರೈತರಿಗೆ ಟ್ಯಾಕ್ಟರ್ ಖರೀದಿಸಲು ಬೆಳೆ ಸಾಲ ಎಮ್ಮೆ, ಆಕಳು ಖರೀದಿಸಲು ಸೇರಿದಂತೆ ವಿವಿಧ ರೀತಿಯ ಸಾಲ ಯೋಜನೆಗಳಿವೆ. ರೆಷ್ಮೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಇವುಗಳಿಗೆ ಸಾಲ ನೀಡುತ್ತಿದ್ದು, ರೈತರ ಪ್ರಯೋಜನ ಪಡೆಯಲು ಕೇಳಿಕೊಂಡರು. ಎಫ್ ಒ ಎಸ್ ಶಿವನಗೌಡ ಹಾಗೂ ಆನಂದ ಹೂಗಾರ ಮಾತನಾಡಿದರು. ಇದೇ ವೇಳೆ ಹಿರೇಬೇವನೂರ ಗ್ರಾಮಸ್ಥರು. ಹಿರೇಬೇವನೂರ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಶಾಖೆ ತೆಗೆಯಲು ಮನವಿ ಮಾಡಿದರು. ಬ್ಯಾಂಕ್ ಅಧಿಕಾರಿಗಳು ಕೇಂದ್ರ ಕಛೇರಿಗೆ ಕಳುಹಿಸಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರದಾರ ಮುತ್ತುಗೌಡ ಪಾಟೀಲ, ನಾಗಪ್ಪಗೌಡ ಪಾಟೀಲ, ಸಂಗಣ್ಣ ಉಪ್ಪಿನ, ಬಸವರಾಜ ಅರ್ಜುಣಗಿ, ಅಣ್ಣಾರಾಯ ಬಮ್ಮನಳ್ಳಿ, ಬಸವರಾಜ ಬಿರಾದಾರ, ಮಲ್ಲೇಶಿ ಮೇತ್ರಿ ಶಂಕ್ರೆಪ್ಪ ಬುರಕುಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮಸ್ಥರು, ಗ್ರಾಮದಲ್ಲಿ ಎಸ್ ಬಿ ಐ ಶಾಖೆ ತೆರೆಯಲು ಬ್ಯಾಂಕ್ ಅಧಿಕಾರಿಗಳಿ ಮನವಿ ಸಲ್ಲಿಸಿದರು.




















