ಪವಾಡ ಪುರುಷನ ನಂದಿ ಕೋಲ ಇಂಡಿಗೆ ಆಗಮನ..
ಇಂಡಿ : ಸುಕ್ಷೇತ್ರ ಇಂಡಿಯ ಪುರದೈವವಾಗಿರುವ ಶ್ರೀ ಸದ್ಗುರು ಶಾಂತೇಶ್ವರ ದೇವಾಯಲಕ್ಕೆ ಇಂದು ಜೋಡಿ ನಂದಿಕೋಲಗಳ ಆಗಮನವಾಯಿತು.
ಶ್ರೀಶೈಲಗಿರಿ ಪರ್ವತದಿಂದ ನೂತನವಾಗಿ ಜೋಡಿ ನಂದಿ ಕೋಲಗಳ ಇಂದು ಮೊದಲಿಗೆ ಪಟ್ಟಣದ ಬಸವರಾಜೇಂದ್ರ ದೇವಸ್ಥಾನ ಹತ್ತೀರ ಆಗಮಿಸಿದ್ದವು,
ಅಲ್ಲಿಂದ ಇಂಡಿಪುರದ ಜನರು ಸಕಲ ವಾಧ್ಯವೈಭಗಳೊಂದಿಗೆ ಭಜನೆ ಮೇಳ, ಪಲ್ಲಕ್ಕಿಯ ಸಮೇತ ಭವ್ಯ ಮೆರವಣಿಗೆಯೊಂದಿಗೆ ಸಾಗಿ ಶ್ರೀ ಸದ್ಗುರು ಶಾಂತೇಶ್ವರ ದೇವಸ್ಥಾನಕ್ಕೆ ಆಗಿಮಿಸಿದವು. ಈ ಸಂದರ್ಭದಲ್ಲಿ ಶಾಂತೇಶ್ವರ ದೇವಾಲಯದ ಆಡಳಿತ ಸಮಿತಿಯವರು, ನಗರದ ಹಲವಾರು ಗಣ್ಯರು, ಯುವಕರು ಪಾಲ್ಗೊಳ್ಳಂಡು ನಂದಿ ಕೋಲಗೆ ವಿಶೇಷ ಮೆರಗು ನೀಡಿದರು.