ಸಿರವಾರ: ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಅಂಜುಮನ್ ಕಮಿಟಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಪಟ್ಟಣದ ನೂರಾನಿ ಮಜೀದ್ ನಲ್ಲಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಮಿಟಿಯ ಪದಾಧಿಕಾರಿಗಳು ಸದಸ್ಯರಿಗೆ ಶಾಲು ಮತ್ತು ಹಾರಗಳನ್ನು ಹಾಕಿ ಗೌರವಿಸಿದರು. ಕಮಿಟಿಯವರು ಮತ್ತು ಸನ್ಮಾನ ಸ್ವೀಕರಿಸಿದ ಸದಸ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅಂಜುಮನ್ ಸಮಿತಿಯ ಅಧ್ಯಕ್ಷ ವಲಿಸಾಬ್ ಗುತ್ತೇದಾರ, ಇಬ್ರಾಹಿಂ, ಮಹಿಬೂಬ್ ಸಾಬ್, ಅಜೀಮುದ್ದೀನ್, ಲತೀಫ್ ಸಾಬ್, ಹಾಜಿಮಲಂಗ್, ರಾಜ್ಯಹಮ್ಮದ್ ಬುಗುರಿ, ಖಾಸಿಂ ಸೇರಿದಂತೆ ಇತರರು ಇದ್ದರು.