ರಾಯಚೂರು : ನಗರದ ನವೋದಯ ಇಂಜಿನಿಯರಿಂಗ್ ಕಾಲೇಜು ಹಿಂಭಾಗದ ತಿರುಮಲ ಲೇಔಟ್ ಎದುರುಗಡೆ ಗುಜರಿಗೆ ರಸ್ತೆಯಲ್ಲಿ ಇರುವ ರತ್ನಗಿರಿ ಪಾರ್ವತಿ ಸಮೇತ ರತ್ನೇಶ್ವರ ದೇವಾಲಯದಲ್ಲಿ ಗುಂಜಳ್ಳಿ ಬಸವರಾಜ ಗುರು ಸ್ವಾಮಿಗಳ ವತಿಯಿಂದ ಪಾರ್ವತಿ ರತ್ನೇಶ್ವರ್ ಕಲ್ಯಾಣೋತ್ಸವ, ಪಲ್ಲಕ್ಕಿ ಸೇವೆ ಹಾಗೂ ದಕ್ಷಯಜ್ಞ ಮತ್ತು ಮಂರ್ಜಾಲ ಶುಭ ಸ್ವಾಮಿಗಳು ವತಿಯಿಂದ ನಂದಿಕೋಲು ಸೇವೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುರಳಿ ಗುರುಸ್ವಾಮಿ, ಮೇಘನಾದ್ ಗುರುಸ್ವಾಮಿ, ರಾಜು ಗುರುಸ್ವಾಮಿ, ಆನಂದ್ ಗುರುಸ್ವಾಮಿ, ಉರುಕುಂದಪ್ಪ ಗುರುಸ್ವಾಮಿ, ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.