ಸಂಸದರು..! ಸ್ವ ಗ್ರಾಮದಲ್ಲಿ, ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಮಾಡಿದ್ದ ಘನ ಕಾರ್ಯಗಳೇನು..? ಶಾಸಕ ಯಶವಂತರಾಯಗೌಡ
ಇಂಡಿ : ಇಂಡಿ ವಿಧಾನ ಸಭೆಯ ಕ್ಷೇತ್ರದ ಮೇಲೆ ಕಪ್ಪು ಚುಕ್ಕೆಯ ಅಪವಾದ ಇದೆ. ಈ ಹಿಂದೆ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಮ್ಮ ಭಾಗದವರು ಎಂದು ಭಾವನಾತ್ಮಕ ಹಾಗೂ ಅಭಿಮಾನದಿಂದ ಅತೀ ಹೆಚ್ಚು ಮತಗಳು ರಮೇಶ್ ಜಿಗಜಿಣಿಗೆ ಅವರಿಗೆ ನೀಡಿ ೩ ಮೂರು ಬಾರಿ ಆಯ್ಕೆ ಮಾಡಿ ಸಂಸತ್ತು ಭವನಕ್ಕೆ ಕಳುಹಿಸಿ ಕೊಟ್ಟಿದ್ದಿರಿ. ಆದರೆ ಅವರು ಸ್ವ ಗ್ರಾಮದಲ್ಲಿ, ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಮಾಡಿದ್ದ ಘನ ಕಾರ್ಯಗಳೇನು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಿಡಿಕಾರಿದರು.
ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಹಾಗೂ ಅಭ್ಯರ್ಥಿ ಪ್ರೋ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ ಮಾತನಾಡತ್ತಿದ್ದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದು ಏನು..? ಭಾವನಾತ್ಮಕ ರಾಜಕಾರಣ ಮಾಡಿ, ಈಗ ಅಘೋಷಿತ ಐಟಿ, ಇಡಿ, ಇನಕಮ್ ಟ್ಯಾಕ್ಸ್ ಹೆದರಿಸಿ ಬೆದರಿಸಿ ರಾಜಕಾರಣ ಮಾಡುತ್ತಿದ್ದಾರೆ. ಈ ಬಾರಿ ನರೇಂದ್ರ ಮೋದಿ ಗೆಲ್ಲುವುದು ಅಷ್ಟು ಸುಲಭವಲ್ಲ. ದುರಾಡಳಿತ ಕೊನೆಯ ಹಾಡುವ ಕ್ಷಣಗಳು ಬಂದಿವೆ. ಈ ಭಾಗದ ಅಭಿವೃದ್ಧಿಗಾಗಿ ಸುಮಾರು 3500 ಕೋಟಿ ಅನುದಾನ ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯ ಅವರು ನೀಡಿದ್ದಾರೆ. ನಮ್ಮ ಅಭ್ಯರ್ಥಿ ರಾಜು ಆಲಗೂರ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮದೆ 10 ರೂಪದ ವಿಜನ್ ಕ್ರೀಯಟ್ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ನಮ್ಮ ಭಾಗದಲ್ಲಿ ಅತೀ ಹೆಚ್ಚು ಮತಕೊಟ್ಟು ಇಂಡಿಯ ಮೇಲೆ ಇರುವ ಕಪ್ಪು ಛಾಯೆ ಹೋಗಲಾಡಿಸೋಣ ಎಂದು ಹೇಳಿದರು.