ಬೆಂಗಳೂರು : ತಳವಾರ ಮತ್ತು ಪರಿವಾರ ಸಮುದಾಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕೊಡಲು ಸುತ್ತೋಲೆ ಹೊರಡಿಸಿದ್ರೂ, ಇಲಾಖೆ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ಕೊಡದೇ, ವಿನಃ ಕಾಲ ಗೊಂದಲ ಸೃಷ್ಟಿಸಿ, ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕೆ ಗಮನಕ್ಕೆ ಕೆ.ಜೆ ಶ್ರೀಧರ ನಾಯಕ ತಂದರು.
ತಳವಾರ, ಪರಿವಾರ ಸಮುದಾಯದ ಜನರು ಸುಮಾರು ವರ್ಷಗಳ ಕಾಲ ಶೋಷಣೆಗೆ ಒಳಪಟ್ಟು, ಪರಿಶಿಷ್ಟ ಪಂಗಡದ ಪ್ರಮಾಣ ಪತ್ರದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಇನ್ನೇನು ಪ್ರಮಾಣ ಪತ್ರ ಸಿಗಬೇಕು ಅನ್ನೊವಷ್ಟರಲ್ಲಿ ಅಧಿಕಾರಿಗಳು ಗೊಂದಲ ಗೂಡು ಮಾಡಿದ್ದಾರೆ. ರಾಜ್ಯ ಸರಕಾರ ಸುತ್ತೋಲೆ ಮೇಲೆ ಸುತ್ತೋಲೆಯ ಸರಮಾಲೆ ಹೊರಡಿಸಿ ಪ್ರಮಾಣ ಪತ್ರ ಸಿಗದಂತೆ ಮಾಡಿಕೊಂಡಂತಾಗಿದೆ. ಈಗಾಗಲೇ ಕೊರೊನಾದ ಕಾಟಕ್ಕೆ ವಿಧ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇನ್ನೂ ನಮ್ಮ ಬುಡಕಟ್ಟು ಸಮುದಾಯದ ಮಕ್ಕಳ ಪರಿಸ್ಥಿತಿ ಜಾತಿ ಪ್ರಮಾಣ ಪತ್ರ ಸಿಗದೇ, ವಂಚಿತವಾಗಿ ಶಾಲೆಗೆ ದಾಖಲಾಗದ ಪರಿಸ್ಥಿತಿ ಯಾಗಿದೆ. ಸಾಮಾಜಿಕ, ಶೈಕ್ಷಣಿಕ , ಆರ್ಥಿಕವಾಗಿ ಕಷ್ಟದಾಯಕವಾಗಿರುವ ಈ ಸಮುದಾಯಕ್ಕೆ ಶೀಘ್ರದಲ್ಲೇ ಕೇಂದ್ರ ಸರಕಾರದ ಆದೇಶದಂತೆ ರಾಜ್ಯ ಸರಕಾರ ಯತ್ತಾವತ್ತಾಗಿ ಆದೇಶ ಹೋರಡಿಸಿ ಜಾತಿ ಪ್ರಮಾಣ ಪತ್ರ ಕೊಡಬೇಕೆಂದು ವಿಸ್ತೃತ ರೂಪದಲ್ಲಿ ಚರ್ಚೆಯ ಮಾಡಿದರು. ಈ ಸಂದರ್ಭದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಬಸವನಗೌಡ, ಅಪರ ಕಾರ್ಯದರ್ಶಿ ಮತ್ತು ಸಮುದಾಯದ ಯುವಕರು ಉಪಸ್ಥಿತರು.