ಸಿಂದಗಿ ತಾಲೂಕಿನ ಗುಬ್ಬೇವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಪಾಲಕರ ಸಭೆ.
ಸಿಂದಗಿ : ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ..! ಪಾಲಕರ ಪಾತ್ರವು ಅಷ್ಟೇ ಮುಖ್ಯ ಎಂದು ಪ್ರಾಂಶುಪಾಲ ರವೀಂದ್ರ ಬಂಥನಾಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶನಿವಾರ ಸಿಂದಗಿ ತಾಲೂಕಿನ ಗುಬ್ಬೇವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿರುವ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ನಮ್ಮಶಾಲೆಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದ ಲ್ಲಿ ಒಳ್ಳೆಯ ಸಾಧನೆ ಮಾಡಲು ಪಾಲಕರು ಸಹಕಾರ ನೀಡಬೇಕು ಮಕ್ಕಳಲ್ಲಿ ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು ಪಾಲಕರು ಶಿಕ್ಷಕರಿಗೆ ತಮ್ಮ ಮಗುವಿನ ವಿದ್ಯಾ ಅಭ್ಯಾಸದ ಪ್ರತಿ ತಿಂಗಳ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕು ಎಂದು ಪ್ರಾಂಶುಪಾಲರಾದ ಶ್ರೀರವೀಂದ್ರ ಬಂಥನಾಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಪಾಲಕರ ಪ್ರತಿನಿಧಿಯಾಗಿ ಶ್ರೀಬಸವರಾಜ್ ಪಡಶೆಟ್ಟಿ ಶ್ರೀಪರಶುರಾಮ್ ಕರ್ಜಗಿ ಹಾಗೂ ಸೂರ್ಯಕಾಂತ ವಡಗೇರಿ . ಶ್ರೀಮತಿ ಶರಣಮ್ಮ ಬಿರಾದಾರ ಅವರು ಅತಿಥಿ ಸ್ಥಾನ ವಹಿಸಿದರು.
ಸಂಗೀತ ಶಿಕ್ಷಕ ರಮೇಅ ಗುಬ್ಬೆವಾಡ ನಿರೂಪಣೆ, ವಿಜ್ಞಾನ ಶಿಕ್ಷಕ ಸಂತೋಷ ಬಿರಾದಾರ ಸ್ವಾಗತಿಸಿದರು. ಶ್ರೀಶೈಲ್ ಮಳ್ಳಿ ಅವರು ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಮುದ್ದು ವಿದ್ಯಾರ್ಥಿಗಳು. ಪಾಲಕರು.ಗುಬ್ಬೇವಾಡ ಮೋರಾರ್ಜಿದೇಸಾಯಿ ವಸತಿ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.