ಇಂಡಿ : ಜಮ್ಮು ಕಾಶ್ಮೀರ 370 ನೇ ವಿಧಿ ರದ್ದಾಗಬೇಕು, ರಾಮ ಮಂದಿರ ನಿರ್ಮಾಣವಾಗಬೇಕು, ಜಗತ್ತಿಗೆ ಜಗದ್ಗುರು ಭಾರತದೇಶ ವಾಗಬೇಕೆಂದು ಪಂಡಿತ ದಿನದಯಾಳ ಉಪಾದ್ಯಾಯರು ಪಣತೊಟ್ಟಿದ್ದರು. ಅವರ ಆಸೆಯಂತೆ ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿಜಿ ಅವರು ಕಾರ್ಯರೂಪಕ್ಕೆ ತಂದು ಅವರ ಆತ್ಮಕ್ಕೆ ಶಾಂತಿ ನೀಡಿದರು ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಪಟ್ಟಣದ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಭಾರತೀಯ ಜನತಾ ಪಾರ್ಟಿ ಸಂಸ್ಥಾಪಕ, ಅಗ್ರಗಣ್ಯ ನಾಯಕ ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತಾನಾಡಿ ಹೇಳಿದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕರ್ತರು ನಡೆಯೋಣ ಅಂತ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ಉಪನ್ಯಾಸಕರಾಗಿ ಜಿಲ್ಲಾ ವಿಶೇಷ ಆಮಂತ್ರಿತರಾದ ಸಿದ್ಧಲಿಂಗ ಹಂಜಗಿ ಮಾತನಾಡಿದ ಅವರು, ಪಂಡಿತ್ ದೀನದಯಾಳ ಉಪಾಧ್ಯಾಯರ ಸಂಪೂರ್ಣ ಜೀವನ ಚರಿತ್ರೆ ನಡೆದು ಬಂದ ದಾರಿ ಅವರ ದೇಶಕ್ಕಾಗಿ ಬಲಿದಾನ ಏಕಾತ್ಮ ಮಾನವತಾವಾದ ಎಂದರು. ದೇಶ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಭಾರತೀಯ ಜನತಾ ಪಾರ್ಟಿ ಯಿಂದ ಮಾತ್ರ ಸಾಧ್ಯವೆಂದು ತಿಳಿದು ಒಂದು ಬೀಜ ನೆಟ್ಟರು. ಆ ಬೀಜ ಮೊಳಕೆಯೊಡೆದು ಗಿಡವಾಗಿ, ಮರವಾಗಿ, ಹೆಮ್ಮರವಾಗಿ ಬೆಳೆದು ದೇಶದ ಜನರಿಗೆ ಹಣ್ಣು ಮತ್ತು ನೆರಳು ಕೊಡುವ ಗಿಡವಾಗಿದೆ. ಅದುವೇ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದ ಮರ. ಪಕ್ಷದ ಧೋರಣೆ, ಪಕ್ಷದ ಉದ್ದೇಶ ಒಂದೇ ಅದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸರ್ವವ್ಯಾಪಿ ಸರ್ವಸ್ಪರ್ಶಿ ಇದುವೇ ಭಾರತೀಯ ಜನತಾ ಪಾರ್ಟಿಯ ಉದ್ದೇಶ. ಮೊದಲು ದೇಶ,ನಂತರ ಪಕ್ಷ, ನಂತರ ವ್ಯಕ್ತಿ ಹೀಗೆ ಅನೇಕ ಉದಾಹರಣೆಗಳನ್ನು ಕೊಟ್ಟು ದೇಶದ ಭದ್ರತೆಗಾಗಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪಂಡಿತ ದೀನದಯಾಳ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಡೆಯುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸು ಗೌಡ ಬಿರಾದರ್, ಶೀಲವಂತ ಉಮರಾಣಿ, ಮುತ್ತು ದೇಸಾಯಿ, ಅನಿಲ್ ಜಮಾದಾರ್, ರಾಜಕುಮಾರ ಸಗಾಯಿ, ರವಿ ವಗ್ಗೆ, ಭಿಮಸಿಂಗ ರಾಠೋಡ, ಪುಟ್ಟು ಗೌಡ ಪಾಟೀಲ್, ದೇವೇಂದ್ರ ಕುಂಬಾರ್, ರಮೇಶ್ ದರೆನವರ್, ಬುದ್ದುಗೌಡ ಪಾಟೀಲ್, ಅನಿಲ್ ಗೌಡ ಬಿರಾದರ, ಸೋಮು ನಿಂಬರಗೀಮಠ, ಶಾಂತು ಕಂಬಾರ್, ಶರಣು ಬಂಡಿ, ಕಾಶಿನಾಥ ನಾಯ್ಕೋಡಿ, ಸಿದ್ದಣ್ಣ ಶಿವುರ, ಮಲ್ಲು ವಾಲಿಕಾರ್, ಗುರುದೇವಿ ತರಡಿ, ವಿಜಯಲಕ್ಷ್ಮಿ ರೋಗಿಮಠ ಹಾಗೂ ಪಕ್ಷದ ಪದಾಧಿಕಾರಿಗಳು, ಪುರಸಭೆಯ ಸದಸ್ಯರು ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಇನ್ನೂ ಅನೇಕರು ಉಪಸ್ಥಿತರಿದ್ದರು.