ಇಂಡಿ : ಪಟ್ಟಣದಲ್ಲಿ ಪಂಚರತ್ನ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಹೊತ್ತು ಆಗಮಿಸಿ ಸ್ವಾಗತ ಕೋರಿದರು.
ಎಚ್ ಡಿ ಕೆ ನೇ ನೇತೃತ್ವದ ಪಂಚರತ್ನ ಯಾತ್ರೆ ತಾಲ್ಲೂಕಿನ ಅಗರಖೇಡ, ಹಿರೇಬೇವನೂರ, ಆಳೂರ, ಲಚ್ಯಾಣ, ಮಾವಿನಹಳ್ಳಿ ಹೀಗೆ ಹಲವು ಹಳ್ಳಿಗೆ ಸಂಚರಿಸಿ ಸಾಯಂಕಾಲ ೭ ಘಂಟೆಗೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಪಟ್ಟಣದ ಅಗರಖೇಡ ರಸ್ತೆಯ ಶ್ರೀನಿವಾಸ ಚಿತ್ರಮಂದಿರದಿಂದ ಸುಮಾರು ಸಂಖ್ಯೆಯಲ್ಲಿ ಕುಂಭ ಹೊತ್ತ ಮಹಿಳೆಯರು ಎಚ್ ಡಿ ಕೆ ನೇತೃತ್ವದ ಪಂಚರತ್ನ ಯಾತ್ರೆಗೆ ಸ್ವಾಗತ ಕೋರಿದರು. ತದನಂತರ ಅಲ್ಲಿಂದ ಬಸವೇಶ್ವರ ವೃತ್ ದ ವರೆಗೆ ತೆರಳಿತ್ತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ , ಘೋಷಿಸಿ ಅಭ್ಯರ್ಥಿ ಬಿ.ಡಿ.ಪಾಟೀಲ, ಆರ್ ಕೆ ಪಾಟೀಲ, ಬಿ.ಜಿ.ಪಾಟೀಲ್ , ಡಾ. ರಮೇಶ್, ಅಯೂಬ್ ನಾಟೀಕಾರ, ಸಿದ್ದು ಡಂಗಾ ,ಮೈಹಿಬೂಬ್ ಬೇವನೂರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.