ಇಂಡಿ : ಇಂಡಿ ವಿಧಾನ ಸಭಾ ಮತಕ್ಷೇತ್ರಕ್ಕೆ ಜ.೧೭ ರಂದು ಪಂಚ ರತ್ನ ಯಾತ್ರೆ ಆಗಮಿಸಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾನಾಡಿದ ಅವರು, ಶಿಕ್ಷಣ, ವಸತಿ, ನಿರುದ್ಯೋಗ ನಿವಾರಣೆ, ಸ್ವ ಉದ್ಯೋಗ ಸ್ಥಾಪನೆ, ಆರೋಗ್ಯ ಕ್ಷೇತ್ರದ ಸುಧಾರಣೆ ಸೇರಿ ಹಲವು ಅಂಶಗಳು ಕುರಿತು ಪಂಚರತ್ನ ಯಾತ್ರೆಯಲ್ಲಿ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಮಾತಾನಾಡಿದ ಅವರು, ಹಿಂದೂ ಮುಸ್ಲಿಂ ಅಂತಾ ಇಬ್ಬಾಗ ಮಾಡುವುದು, ದೇಶ ಒಡೆಯುವುದು ಬಿಜಿಪಿ ಪಕ್ಷದ ಕಾಯಕ. ೧೫ ಸಾವಿರ ಪ್ರತಿಯೊಬ್ಬರ ಖಾತೆಗೆ ಹೇಳಿದ್ರೂ ಒಬ್ಬರ ಖಾತೆಗೆ ೧೫ ರೂಪಾಯಿ ಜಮಾಗೊಂಡಿಲ್ಲ. ಇನ್ನೂ ಕಾಂಗ್ರೆಸ್ ಪಕ್ಷ ಸುಮಾರು ೫೦ ವರ್ಷ ಆಳಿದರೂ ಯಾವ ಕಾರ್ಯಕ್ರಮ ಕೊಟ್ಟರು ? ರೈತರ ಪರ, ಬಡವರ ಪರ, ದಿನ ದಲಿತರ ಪರ ಏನಾದರೂ ಒಂದು ಕಾರ್ಯಕ್ರಮ ಬಗ್ಗೆ ಆದರೂ ಮಾತಾಡ್ತಾರ ! ಒಂದು ಸೂಕ್ತ ಯೋಜನೆ ಕೊಡಲಿಲ್ಲ, ಇವತ್ತು ಬಡ ಸಾಮಾನ್ಯ ಜನರು, ರೈತರು, ವ್ಯಾಪಾರಸ್ಥರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾಸ್, ಪೆಟ್ರೋಲಿಯಂ, ರಸ ಗೊಬ್ಬರ, ತಿನ್ನುವ ದಿನಸಿ ಹಿಡಿದು ಇತರೆ ವಸ್ತುಗಳ ಬೆಲೆ ಗಗನ ಕುಸುಮವಾಗಿದೆ ಎಂದು ಹೇಳಿದರು. ಆದರೆ ನಮ್ಮ ಜೆಡಿಎಸ್ ಪಕ್ಷ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ , ಕೇವಲ ೧೪ ತಿಂಗಳಲ್ಲಿ ಸುಮಾರು ೨೮ ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ಇತಿಹಾಸವಿದೆ ಎಂದು ಹೇಳುತ್ತಾರೆ.
ಜೆಡಿಎಸ್ ಪಕ್ಷದ ಘೋಷಿಸಿ ಅಭ್ಯರ್ಥಿ ಬಿ.ಡಿ.ಪಾಟೀಲ, ಕಿತ್ತೂರ ಕರ್ನಾಟಕ ಅಧ್ಯಕ್ಷ ವಿಜಯಕುಮಾರ್ ಬೊಸಲೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಯೂಬ್ ನಾಟೀಕಾರ, ತಾಲೂಕು ಪ್ರ.ಕಾ. ಶ್ರೀಶೈಲಗೌಡ ಪಾಟೀಲ ಮೈಹಿಬೂನ ಬೇನೂರ, ಮಜೀದ ಸೌದಾಗಾರ, ಬಸವರಾಜ ಹಂಜಗಿ, ಡಾ ರಮೇಶ, ಇಸಾಕ ಸೌದಾಗಾರ, ಸಿದ್ದು ಡಂಗಾ, ದುಂಡು ಬಿರಾದಾರ, ನಿಯಾಜ ಅಗರಖೇಡ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.