ಮನೆ ಮನೆಗೆ ಪಾದಯಾತ್ರೆ ಮೂಲಕ ಪಂಚರತ್ನ ಕಾರ್ಯಕ್ರಮ ಪ್ರಚಾರ, ಬಿ ಡಿ ಪಾಟೀಲರಿಂದ ಗ್ರಾಮ ವಾಸ್ತವ್ಯ..
ಇಂಡಿ : ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ, ರೈತಪರ, ಮಹಿಳಾ ಸಬಲೀಕರಣ, ನಿರುದ್ಯೋಗ ನಿವಾರಣೆ ಮುಂತಾದ ಯೋಜನೆಗಳನ್ನು ಜಾರಿಗೆ ತರಲು ಜೆಡಿಎಸ್ ಬೆಂಬಲಿಸಿ ಆರ್ಶಿವಾದ ನೀಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಮತಕ್ಷೇತ್ರದ ಭೀಮಾ ತೀರದ ಅಗರಖೇಡ ಗ್ರಾಮದ ಶಂಕರಲಿಂಗ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಪಂಚರತ್ನ ಯೋಜನೆಯ ಮಹತ್ವ ತಿಳಿಸಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ನೀಲಕಂಠ ಸಾವಳಗಿ, ಗುರುನಾಥ್ ಬೂದಿಹಾಳ, ಸುರೇಶ ಬಿರಾದಾರ, ಸಿದ್ದಪ್ಪ ಕೋರೆ, ಕಾಶಿನಾಥ್ ಮಾನೆ, ಭೀಮಾಶಂಕರ ಕ್ಷೇತ್ರಿ, ಪರಶುರಾಮ ಸೌವಳೆ, ಆರೀಫ್ ಮುಲ್ಲಾ, ರಮೇಶ್ ಹೂಸಮನಿ, ಬೀರಪ್ಪ ಪೂಜಾರಿ, ಮಹಾಂತು ಹೂರಕೇರಿ, ತುಕಾರಾಂ ತಾಂಬೆ, ಪಂಚಪ್ಪಸಾಹುಕಾರ ಪೋಲೀಸ್ ಪಾಟೀಲ್, ಅಯೂಬ್ ನಾಟೀಕರ, ಶ್ರೀಶೈಲಗೌಡ ಪಾಟೀಲ, ಹಣಮಂತ ಹೂನ್ನಳ್ಳಿ, ಸಿದ್ದು ಡಂಗಾ, ನಾಗೇಶ ತಳಕೇರಿ, ಸದ್ದಾಂ ಅರಬ್, ಅಣ್ಣಾರಾಯ ಬಿರಾದಾರ, ಡಾ ರಮೇಶ ರಾಠೋಡ, ವಿಠ್ಠಲ ಹಂಜಗಿ, ದುಂಡು ಬಿರಾದಾರ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ ಕುಮಾರ್ ಸುರ್ಗಳ್ಳಿ, ಸುದರ್ಶನ್ ಶಿಂದೆ, ಬಾಬು ಕಾಂಬಳೆ, ಭೀರು ನಿಂಬಾಳ, ರತ್ನಾಕರ್ ಪರೀಟ, ನೈನಸಾಬ ಮಕಾಂದಾರ, ವಿಠ್ಠಲ ಸೋಲಾಪೂರ, ರಮ್ಜಾನ್ ಮಕಾಂದಾರ ಮುಂತಾದ ನಾಯಕರು ಉಪಸ್ಥಿತರಿದ್ದರು.