ಇಂಡಿ: ಕೂಡಲಸಂಗಮದಲ್ಲಿ ನಡೆಯುತ್ತಿರುವ ಪಂಚಮಸಾಲಿ 2ಎ ಮೀಸಲಾತಿ ಧರಣಿ ಹೋರಾಟಕ್ಕೆ, ತಾಂಬಾ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪಂಚಮಸಾಲಿ ಸಮಾಜ ಬಾಂಧವರು ಮೇ ಎರಡರಂದು ವಿಜಯಪುರ ಜಿಲ್ಲೆಯ ಸರಿದಿ ಇದ್ದು, ತಾವೆಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಕೈಜೋಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಜಯಪುರ ಜಿಲ್ಲೆ ಲಿಂಗಾಯತ ಪಂಚಮಸಾಲಿ ಯುವ ಘಟಕದ ಕಾರ್ಯದರ್ಶಿ ಶಿವರಾಜ್ ಕೆಂಗನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಸಮಾಜದ ಮುಖಂಡರಾದ ಅಡಿಯಪ್ಪ ರೊಟ್ಟಿ, ಬಸು ಅವಟಿ, ಗುರಪ್ಪ ಜಂಬಗಿ, ಬಾಬು ತಿಲ್ಯಾಳ, ಗೋಪಾಲ ಅವರಾದಿ, ಕಲ್ಯಾಣಿ ಕೆಮಶೆಟ್ಟಿ,ಬಾಬು ಅವಟಿ, ಧರೆಪ್ಪ ಕೆಂಗನಾಳ, ಶಿವನಗೌಡ ಬಿರಾದರ್, ಗುರಪ್ಪ ಹಂಚಿನಾಳ, ಇರಸಿದ್ದಪ್ಪ ಗಳೇದ, ನಾಗಗೌಡ ಬಗಲಿ, ರಾಜು ಕಂಬಾರ, ರವಿ ಗುಂಜೇಟ್ಟಿ, ಇನ್ನೂ ಅನೇಕ ಮುಖಂಡರು ಇದ್ದರು.