ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಬಡವರಿಗೆ ಮುಟ್ಟಬೇಕು: ಶಿವಶಂಕರಗೌಡ ಹಿರೇಗೌಡರ
ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅಧಿಕಾರಿ ಜೊತೆಗೆ ಸಭೆ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಮ್ಮ ಸಿದ್ದರಾಮಯ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗ್ರಹಲಕ್ಷ್ಮಿ,ಗ್ರಹ ಜ್ಯೋತಿ ಯುವ ನಿಧಿಗಳು ಪ್ರತಿ ಕುಟುಂಬಕ್ಕೆ ಯೋಜನೆಗಳನ್ನು ತಲುಪಲು ನಮ್ಮ ಸರಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಗ್ಯಾರಂಟಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯತ ಸಮುದಾಯದ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಸಭೆ ಶುಕ್ರವಾರ ನಡೆಯಿತು.
ಈ ಸಭೆಯಲ್ಲಿ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಬಡವರಿಗೆ ಮುಟ್ಟಬೇಕು.ಗ್ರಹ ಲಕ್ಷ್ಮಿ ಯೋಜನೆ ಮನೆ ಯಜಮಾನಿ ಮರಣ ಹೊಂದಿದರೆ ಕುಟುಂಬಕ್ಕೆ ಸೊಸೆಗೆ ಖಾತೆ ಹಣ ಹಾಕಬೇಕು.
ಎಸ್ ಸಿ ಪಿ ಟಿಎಸ್ ಅನುದಾನ ವಿವಿಧ ಗ್ರಾಮಗಳಿಗ ನಿವಾಸಿಗಳು ಸಾರ್ವಜನಿಕರಿಗೆ ಕಂಬಗಳನ್ನು ಹಾಕಿ ವಿದ್ಯುತ್ ಜೋಡಣೆ ಮಾಡಬೇಕು. ಪಂಚ ಗ್ಯಾರಂಟಿ ಯೋಜನೆ ಇಲಾಖೆ ಅಧಿಕಾರಿಗಳು ಗ್ರಹಲಕ್ಮಿ,ಗ್ರಹ ಜ್ಯೋತಿ,ಶಕ್ತಿ,ಯುವನಿಧಿ, ಪಡಿತರ ನ್ಯಾಯಬೆಲೆ ಅಂಗಡಿಗಳ ಮುಂದೆ ಎಲ್ಲಾ ಯೋಜನೆ ಗಳು ಕಡ್ಡಾಯವಾಗಿ ನಾಮಪಲಕಗಳು ಹಾಕಬೇಕು ಗ್ಯಾರಂಟಿ ಯೋಜನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆ ತಾಲ್ಲೂಕು ಉಪಾಧ್ಯಕ್ಷ ಲಕ್ಷಣ ಚವ್ಹಾಣ ಅವರು ಮಾತನಾಡಿ ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ, ನಗರ ಪ್ರದೇಶದ ಬಸ್ ಸೇವೆಗಳು ತೊಂದರೆಯಾಗದಂತೆ, ಸವದತ್ತಿ ಎಲ್ಲಮ್ಮದೇವಿ ದೇವಸ್ಥಾನ ದರ್ಶನ ಹೋಗುವ ಪ್ರಯಾಣಿಕರ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲುಬೇಕು ಡಿಪೋ ಮ್ಯಾನೇಜರ್ ಅಶೋಕ ಬೋವಿ ಅವರಿಗೆ ಸಭೆಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ಲೆಕ್ಕಾಧಿಕಾರಿ ವಿರೇಶ ಹುಗಾರ,ಡಿಪೋ ಮ್ಯಾನೇಜರ್ ಅಶೋಕ ಬೋವಿ, ಹಸ್ಕಾಂ ಅಧಿಕಾರಿ ಅರ್ ಎಸ್ ಹಾದಿಮನಿ, ಸಿಡಿಪಿಒ ಶಿವಮೂರ್ತಿ ಕುಂಬಾರ,ತಾಪಂ ಗ್ಯಾರಂಟಿ ವಿಶೇಷ ನಿರ್ವಾಹಕ ಬಾಬು ಪೋತೆಗೋಳ, ಪಂಚ ಗ್ಯಾರಂಟಿ ಯೋಜನೆಳ ಅನುಷ್ಠಾನ ಸಮಿತಿ ಸದಸ್ಯರಾದ ಸರಸ್ವತಿ ಪೀರಾಪೂರ,ಹಣಮಂತ ಕುರಿ, ಸಂಗಪ್ಪ ಮೇಲಿನಮನಿ, ಸಂಗಮೇಶ ಚಲವಾದಿ(ನೆಬಗೇರಿ),
ಬಸವರಾಜ ಚಿನಿವಾರ,ರಾಮಣ್ಣ ರಾಜನಾಳ, ಸುಜಾತಾ ಸಿಂದೆ, ಬುಡ್ಡಸಾಬ ಚಪ್ಪರಬಂದ, ಸೇರಿದಂತೆ ಉಪಸ್ಥಿತರಿದ್ದರು.