ಇಂಡಿ : ಪಂಚರಾಜ್ಯಗಳಲ್ಲಿ ಬಿಜೆಪಿಯ ಗದ್ದುಗೆ ಹಿಡಿಯಲಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಇಂಡಿ ಪಟ್ಟಣದ ಶಾಂತೇಶ್ವರ ಸಹಕಾರಿ ಬ್ಯಾಂಕನಲ್ಲಿ ಮಾತಾನಾಡಿದ ಅವರು, ಇಂಡಿ ಪುರಸಭೆ ಬಿಜೆಪಿ ತೆಕ್ಕೆಗೆ ಸಹಕರಿಸಿದ ಜನರಿಗೂ, ಶ್ರಮ ವಹಿಸಿ ಕಾರ್ಯ ನಿರ್ವಹಿಸಿದ ಪಕ್ಷದ ಮುಖಂಡರಿಗೂ ಹಾಗೂ ಕಾರ್ಯಕರ್ತರು ಅಭಿನಂದನೆ ಹೇಳಿದರು. ನಾಳೆ ಕಲ್ಬುರ್ಗಿ ಜಿಲ್ಲೆಯ ಮಹಾನಗರ ಪಾಲಿಕೆ, ಮೆಯರ್ ಮತ್ತು ಉಪಮೆಯರ್ ಚುನಾವಣೆ ನಡೆಯುತ್ತಿದ್ದು, ಅಲ್ಲಿ ಭಾಗವಹಿಸುತ್ತಿದ್ದೆನೆ. ಇನ್ನೂ ಈ ಬಾರಿ ಬಜಟ್ ರೈತರ ಬಜೆಟಯಾಗಿ ಐತಿಹಾಸಿಕ ಹಿನ್ನೆಲೆಯಿಂದ ಕೂಡಿದಂತಾಗಿದೆ. ಸ್ವತಂತ್ರ ಪೂರ್ವದಿಂದಲೂ ನದಿ ಜೋಡಣೆ ಕನಸ್ಸಾಗಿ ರೈತರು ಕಾಣುತ್ತಿದ್ದರು. ಈ ಬಾರಿ ಆ ರೈತನ ಆಶೆಯಕ್ಕೆ ಬಜೆಟ್ ಮಂಡನೆ ಪೂರಕವಾಗಿದೆ. ಇಲ್ಲಿಯವರೆಗೆ ಸಾಮನ್ಯವಾಗಿ ಬಜೆಟ್ ಬಗ್ಗೆ ಟೀಕೆ ಟಿಪ್ಪಣಿ ಕೇಳಿ ಬರುತ್ತಿದ್ದವು. ಆದರೆ ಅಂತಹ ಟೀಕೆ ಟಿಪ್ಪಣಿಯ ಚೆರ್ಚೆಗಳು ಕಂಡು ಬರಲಿಲ್ಲ. ಅದಕ್ಕಾಗಿ ಇದು ಜನರ ಆಶಾದಾಯಕ ಮತ್ತು ಮೆಚ್ಚುಗೆ ಬಜೆಟ್ ಆಗಿದೆ ಎಂದು ಹೇಳಿದರು.
ಒಟ್ಟಾರೆಯಾಗಿ 7 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರಕಾರ ಜನ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ದಿ ಆಡಳಿತ ಮಾಡಿದೆ. ಹಾಗಾಗಿ ಪಂಚರಾಜ್ಯಗಳಲ್ಲಿ ಕಮಲ ಅರಳೊದು ಪಕ್ಕಾ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ, ರೈತ ಮೂರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ್, ಯಲ್ಲಪ್ಪ ಹದಿರಿ, ಗಣಪತಿ ಭಾಣಿಕೊಲ, ದೇವೆಂದ್ರ ಕುಂಬಾರ, ವಿಜು ಮೂರಮೂನ, ಬುದ್ದುಗೌಡ ಪಾಟೀಲ್, ಭೀಮು ಸಾಹುಕಾರ ಹತ್ತಳಿ, ರಮೇಶ ಧರೆನವರ, ಅನೀಲಗೌಡ ಬಿರಾದಾರ, ಅಶೋಕ ಗೌಡ ಪಾಟೀಲ್, ರಾಜಶೇಖರ ಯರಗಲ್ ಉಪಸ್ಥಿತರು.